ದಾವಣಗೆರೆ: ನಿವೃತ್ತ ನೌಕರರು ಮನೋವಿಕಾಸಕ್ಕೆ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸಿರುವುದು ತುಂಬಾ ಖುಷಿ ತಂದಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ ಪಾಲಾಕ್ಷ ಹೇಳಿದರು.
ಬಾಪೂಜಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಕ್ರೀಡಾ ಕೂಟ ಉದ್ಘಾಟಿಸಿಮಾತನಾಡಿ, ಇತ್ತೀಚೆಗೆ ನಡೆದ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾ ಕೂಟಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಉತ್ಸಾಹ ಕಾಣುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ ಆರ್ ಉಜ್ಜನಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಎಸ್.ಗುರುಮೂರ್ತಿ, ಡಾ.ಹೆಚ್ ಎಂ ವೀರಯ್ಯ, ಕಾರ್ಯದರ್ಶಿ ಬಿ.ಕೆ.ರೇಣುಕಮೂರ್ತಿ, ಸಂಘದ ಪದಾದಿಕಾರಿಗಳಾದ ಬಿ ಎಂ ಮಲ್ಲಿಕಾರ್ಜುನಯ್ಯ, ಜಿ ಸಿ ಕಲ್ಲಪ್ಪ ಹಾಗೂ ಇತರ ಆಜೀವ ಸದಸ್ಯರು ಭಾಗವಹಿಸಿದ್ದರು. ಕ್ರೀಡಾ ಕೂಟವನ್ನು ಬಾಪೂಜಿ ಪ್ರೌಢಶಾಲೆ ಹಿರಿಯ ದೈಹಿಕ ಶಿಕ್ಷಕ ಬಿ.ಇ.ರವಿಕುಮಾರ್ ಹಾಗೂ ಸಿ.ಹನುಮಂತಪ್ಪ ನಡೆಸಿಕೊಟ್ಟರು.



