Connect with us

Dvgsuddi Kannada | online news portal | Kannada news online

ದಾವಣಗೆರೆ: ಕಮ್ಮಾರ, ಬಡಗಿ, ಆಭರಣ ತಯಾರಿಕೆ, ಕುಂಬಾರಿಕೆ ಸೇರಿ ಅತಿ ಸಣ್ಣ ಕುಶಲಕರ್ಮಿಗಳಿಗೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಕಮ್ಮಾರ, ಬಡಗಿ, ಆಭರಣ ತಯಾರಿಕೆ, ಕುಂಬಾರಿಕೆ ಸೇರಿ ಅತಿ ಸಣ್ಣ ಕುಶಲಕರ್ಮಿಗಳಿಗೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಜಿಲ್ಲೆಯ ಅತಿ ಸಣ್ಣ ವೃತ್ತಿಪರ ಕುಶಲಕರ್ಮಿಗಳಿಗಾಗಿ ಸಾಲ-ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಕುಶಲಕರ್ಮಿಗಳು ಆರ್ಥಿಕ ಸಮಸ್ಯೆಯನ್ನು ನಿವಾರಿಸಿಕೊಂಡು ತಮ್ಮ ವೃತ್ತಿ/ಚಟುವಟಿಕೆಯನ್ನು ಮುಂದುವರೆಸಲು ವಾಣಿಜ್ಯ ಬ್ಯಾಂಕ್‍ಗಳು/ಸಹಕಾರ ಬ್ಯಾಂಕ್/ಪ್ರಾದೇಶಿಕ ಗ್ರಾಮೀಣ ಬಾಂಕ್ ರೂ.50000/-ಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು.

ಕಮ್ಮಾರಿಕೆ/ಬುಟ್ಟಿ ಹಣಿಯುವುದು/ಬಡಗಿತನ/ಗೋಲ್ಡ್ ಸ್ಮಿತ್(ಆಭರಣ ತಯಾರಿಕೆ)/ಕಲ್ಲಿನ ಕೆತ್ತನೆ/ಮರದ ಕೆತ್ತನೆ/ಕುಂಬಾರಿಕೆ/ಮಣ್ಣಿನ ವಿಗ್ರಹ ತಯಾರಿಕೆ/ಲೋಹದ ಕರಕುಶಲ/ಬೆತ್ತ ಮತ್ತು ಬಿದಿರು ಉತ್ಪನ್ನ ವಸ್ತುಗಳು/ಲಂಬಾಣಿ ಕಸೂತಿ/ಕಸೂತಿ/ಕಂಬಳಿ ನೇಯುವುದು/ಚಾಪೆ ಹಣೆಯುವುದು ವೃತ್ತಿಪರ ಕುಶಲಕರ್ಮಿಗಳಿಗೆ ಗರಿಷ್ಠ ರೂ.15000/- ಸಹಾಯಧನ ಸಾಲದ ಖಾತೆಗೆ ಜಮಾ ಮಾಡಲಾಗುವುದು. ಅರ್ಜಿದಾರರು 18 ವರ್ಷ ವಯೋಮಾನದ ಮೇಲ್ಪಟ್ಟ ವೃತ್ತಿಪರ ಕುಶಲಕರ್ಮಿಗಳು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜ.25 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top