Connect with us

Dvgsuddi Kannada | online news portal | Kannada news online

ದಾವಣಗೆರೆ: ಆನ್‌ಲೈನ್ ಶಾಪಿಂಗ್ ಮಾಡಲು ಹೋಗಿ 2.26 ಲಕ್ಷ ಕಳೆದುಕೊಂಡ ಇಂಜಿನಿಯರ್

ದಾವಣಗೆರೆ

ದಾವಣಗೆರೆ: ಆನ್‌ಲೈನ್ ಶಾಪಿಂಗ್ ಮಾಡಲು ಹೋಗಿ 2.26 ಲಕ್ಷ ಕಳೆದುಕೊಂಡ ಇಂಜಿನಿಯರ್

ದಾವಣಗೆರೆ: ಆನ್ ಲೈನ್ ಮೂಲಕ ಹಾರ್ಡ್‌ವೇರ್ ವಸ್ತುಗಳನ್ನು ಖರೀದಿಸಲು ಹೋಗಿ ಇಂಜಿನಿಯರೊಬ್ಬರು 2,26788 ರೂ.ಗಳನ್ನು ಕಳೆದುಕೊಂಡು ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಚನ್ನಗರಿ ತಾಲ್ಲೂಕಿನ ಹೊನ್ನೆಮರದಹಳ್ಳಿಯ‌ ಸಾಫ್ಟ್‌ವೇರ್ ಇಂಜಿನಿಯರ್ ರಘು ಬಿ.ಆರ್., ಗೂಗಲ್ ವೆಬ್‌ಸೈಟ್‌ನಲ್ಲಿ ಹಾರ್ಡ್‌ವೇರ್ ಮೆಟಿರಿಯಲ್ಸ್ (ಎಂ. ಎಸ್. ಶೀಟ್ಸ್) ಗಳ ಬಗ್ಗೆ ಹುಡುಕಾಡಿ ರೆಡಿಕಾನ್ ಗ್ಲೋಬಲ್ ಡಾಟ್ ಕಾಂ ಎಂಬ ವೆಬ್‌ಸೈಟ್‌ನಲ್ಲಿ 1, 37620 ರೂ.ಗಳನ್ನು ವಸ್ತುಗಳನ್ನು ಖರೀದಿಸಲು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.

ನಂತರ ಮತ್ತೆ ಸೈಲೆಂಟ್ ಪವರ್‌ ಜನರೇಟರ್‌ಗಳ ವೆಬ್‌ಸೈಟ್‌ನಲ್ಲಿ ಹುಡುಕಾಡಿ ಮ್ಯಾಗ್ನಮ್ ಎಟರ್‌ಪ್ರೈಸ್ ಡಾಟ್ ಕಂ ವೆಬ್‌ಸೈಟ್‌ನಲ್ಲಿ ವಸ್ತುಗಳನ್ನು
ಖರೀದಿಸಲು ಆನ್‌ಲೈನ್‌ ಮೂಲಕ 39,168 ರೂಗಳನ್ನುವರ್ಗಾವಣೆ ಮಾಡಿದ್ದಾರೆ. ಆದರೆ ಅಲ್ಲಿಂದ ಯಾವುದೇ ವಸ್ತುಗಳು ಬಂದಿಲ್ಲ. ಕಂಪನಿಯ ವ್ಯವಸ್ಥಾಪಕರ ಮೊಬೈಲ್‌ಗೆ ಸಂಪರ್ಕಿಸಿದರೂ ಯಾವುದೇ ರೀತಿ
ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೋಸ ಹೋಗಿರುವುದು ಗೊತ್ತಾಗಿ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top