ದಾವಣಗೆರೆ: ಅಪ್ರಾಪ್ತ ವಯಸ್ಕರು ಬೈಕ್ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು, 60ಕ್ಕೂ ಹೆಚ್ಚು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ: ಜಿಲ್ಲೆಯ ವಿವಿಧಡೆ ಕಳ್ಳತನ ಮಾಡುತ್ತಿದ್ದ ತಂದೆ, ಮಕ್ಕಳ ಬಂಧನ; ಬರೋಬ್ಬರಿ 10.90 ಲಕ್ಷ ಮೌಲ್ಯದ ಸ್ವತ್ತು ವಶ
ಎಸ್ಪಿ ಉಮಾ ಪ್ರಶಾಂತ್ ನಿರ್ದೇಶನದಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ನಗರ ಸಂಚಾರ ವೃತ್ತ ಸಿಪಿಐ ಮಂಜುನಾಥ ನೇತೃತ್ವದಲ್ಲಿ ದಕ್ಷಿಣ & ಉತ್ತರ ಸಂಚಾರ ಪೊಲೀಸ್ ಅಧೀಕಾರಿಗಳು ಹಾಗೂ ಸಿಬ್ಬಂದಿಗಳ ತಂಡಗಳು ಕಳೆದೆರೆಡು ದಿನಗಳಲ್ಲಿ ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ 60ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು, ಎಸ್ಪಿ ಅಧ್ಯಕ್ಷತೆಯಲ್ಲಿ ಅರುಣ ವೃತ್ತದಲ್ಲಿರುವ ಸಂಚಾರಿ ಪೊಲೀಸ್ ವೃತ್ತ ಕಚೇರಿ ಮುಂಭಾಗ ಸದರಿ ಅಪ್ರಾಪ್ತ ವಯಸ್ಕರ ಪೋಷಕರುಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಾವಣಗೆರೆ: ಶಾಸಕ ಬಿ.ಪಿ. ಹರೀಶ್ ವಿರುದ್ಧ ಜಾತಿನಿಂದನೆ ಕೇಸ್ ದಾಖಲು
ನಂತರ ಟ್ರಾಫಿಕ್ ಕಮಾಂಡ್ ಸೆಂಟರ್ ಗೆ ಪೋಷಕರುಗಳನ್ನು ಕರೆದೋಯ್ದು ದಾವಣಗೆರೆ ನಗರದಲ್ಲಿ ಹೇಗೆ ಸಿಸಿಟಿವಿ ಸರ್ವೈಲೈನ್ಸ್ ಕೆಲಸ ಮಾಡುತ್ತದೆ. ಸಂಚಾರ ನಿರ್ವಹಣೆ ಮೇಲೆ ಹೇಗೆ ನಿಗಾವಹಿಸಲಾಗಿರುತ್ತದೆ ಎಂದು ಜಾಗೃತಿ ಮೂಡಿಸಲಾಗಿರುತ್ತದೆ.
ಈ ಸಂದರ್ಭದಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ, ಸಂಚಾರ ವೃತ್ತ ನಿರೀಕ್ಷಕ ಮಂಜುನಾಥ, ಪಿಎಸ್ ಐ ಶೈಲಜಾ, ಜಯಶೀಲ, ಶಕುಂತಲಾ, ಮಹಾದೇವ ಬತ್ತಿ, ಸೇರಿದಂತೆ ಸಂಚಾರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.



