ದಾವಣಗೆರೆ: ರಸ್ತೆಯಲ್ಲಿ ಕಳೆದುಕೊಂಡಿದ್ದ ಬಂಗಾರ, ಬೆಳ್ಳಿ ಆಭರಣಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
ದಾವಣಗೆರೆ ಉಪಚುನಾವಣೆ: ಕುಟುಂಬ ರಾಜಕಾರಣಕ್ಕೆ ಮಣಿ ಹಾಕಬೇಡಿ; ಅಹಿಂದ ವರ್ಗಕ್ಕೆ ಟಿಕೆಟ್ ನೀಡಿ
ನಗರದ ಜಾಲಿನಗರ ನಿವಾಸಿ ಹೈದರಅಲಿ ಎಂಬುಔರು ಮೊಟರ್ ಬೈಕಿನಲ್ಲಿ ತಮ್ಮ ಮನೆಗೆ ಹೋಗುತ್ತಿರುವಾಗ ಬ್ಯಾಗ್ ಅಲ್ಲಿದ್ದ ಬಂಗಾರದ ಹ್ಯಾಂಗಿಂಗ್, ಮಾಂಗಲ್ಯ ಸರ್ 2 ಒಂದು ಹಸೀರು ಮಣಿಯ ಲಾಕೆಟ್ ಸರ್ ಒಟ್ಟು ಸುಮಾರು 30 ಗ್ರಾಂ ಬಂಗಾರ, ಬೆಳ್ಳಿಯ 100 ಗ್ರಾಂ ಇರುವ ಒಂದು ಸೊಂಟದ ಚೈನ್ ಮತ್ತು ಗುಂಡು ಹಾಗು ಒಂದು ವಿವೋ ಮೊಬೈಲ್ ಫೋನ್ ರಸ್ತೆಯಲ್ಲಿ ಕಳೆದುಕೊಂಡಿದ್ದಾರು.
ದಾವಣಗೆರೆ: ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಈ ಬಸವನಗರ ಪೊಲೀಸ್ ಠಾಣೆಗೆ ಬಂದು ಕಳೆದುಕೊಂಡ ಸ್ವತ್ತಿನ ವಿವರ ಬಗ್ಗೆ ತಿಳಿಸಿ ಪತ್ತೆ ಮಾಡಿಕೊಡುವ ಬಗ್ಗೆ ತಿಳಿಸಿದ್ದು ಕೂಡಲೇ ಕಾರ್ಯ ಪ್ರವೃತ್ತರಾದ ಬಸವನಗರ ಠಾಣೆಯ ಪಿಎಸ್ಐ ಪ್ರಮಿಳಮ್ಮ ಮತ್ತು ಸಿಬ್ಬಂದಿ ಫಕೃದ್ದೀನ್ ದೂರುದಾರರ ಮಾಹಿತಿ ಆಧರಿಸಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಕಳೆದುಕೊಂಡಿದ್ದ ವಸ್ತುಗಳನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸಿದ್ದಾರೆ. ಪತ್ತೆ ಕಾರ್ಯ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.



