Connect with us

Dvgsuddi Kannada | online news portal | Kannada news online

ದಾವಣಗೆರೆ: ಮರಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಇಬ್ಬರು  ಬಂಧನ; 75.70 ಲಕ್ಷ ವಶ

ಕ್ರೈಂ ಸುದ್ದಿ

ದಾವಣಗೆರೆ: ಮರಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಇಬ್ಬರು  ಬಂಧನ; 75.70 ಲಕ್ಷ ವಶ

ದಾವಣಗೆರೆ: ಪರವಾನಿಗೆ ಪಡೆದು ಮರಳು ವ್ಯಾಪಾರ ಮಾಡುತ್ತಿದ್ದ ದಾವಣಗೆರೆ ನಿವಾಸಿಯೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೈಸೂರು, ಚಿತ್ರದುರ್ಗ ಮೂಲದ 02 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 75.70 ಲಕ್ಷ ನಗದು 2 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಅಕ್ರಮ ಮರುಳು ದಂಧೆ ಮಾಡುತ್ತಿದ್ದೀಯಾ ಎಂದು ದಾವಣಗೆರೆ ನಿವಾಸಿ ಮುಬಾರಾಕ್ ಎಂಬುವರಿಗೆ ಪ್ರತಿ ತಿಂಗಳು 04 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮುಬಾರಾಕ್ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಆರೋಪಿಗಳ ಪತ್ತೆಗೆ ಡಿವೈ ಎಸ್ ಪಿ ಬಿ.ಎಸ್. ಬಸವರಾಜ್, ಪಿಎಸ್ ಐ ಮಿಥನ್,  ಪಿಐ ಲಿಂಗನಗೌಡ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಮೈಸೂರು ಮೂಲದ ಸಿದ್ಧಿಕ್ ಬಂಧಿಸಿ, 75 ಲಕ್ಷ ಹಣ, ಒಂದು ಮೊಬೈಲ್  ಹಾಗೂ ಚಿತ್ರದುರ್ಗ ಮೂಲಕ ಅಶೋಕ್ ಎಂಬ ಆರೋಪಿಯಿಂದ 75 ಸಾವಿರ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ಕಾರ್ಯವನ್ನು ದಾವಣಗೆರೆ ಎಸ್ ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top