ದಾವಣಗೆರೆ: ನಗರದ ಹೊರ ವಲಯದ ಬಿಸಿಲೇರಿ ಗ್ರಾಮದ ತೋಟವೊಂದರಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೋಳ್ ಮೃತದೇಹವನ್ನು ಡಿಎನ್ಎ ಪರೀಕ್ಷೆ ನಡೆಸಲು ತನಿಖಾ ತಂಡ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದಾವಣಗೆರೆ: ಆಕಸ್ಮಿಕ ಬೆಂಕಿಗೆ ನಾಲ್ವರು ರೈತರ 9 ಎಕರೆ ಅಡಿಕೆ ಮರ ಸುಟ್ಟು ಭಸ್ಮ; ಸುಮಾರು 15.50 ಲಕ್ಷ ನಷ್ಟ
ತೀವ್ರ ಸಾಲದಿಂದ ಮನನೊಂದು ಕಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹದಡಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದದ್ದಾರೆ. ಮೃತದೇಹ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರ ವರದಿ ಕಾಯುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಸಿಕ್ಕ ಕಾರಿನ ಅವಶೇಷ, ಸುಟ್ಟ ಮೂಳೆಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಮೃತದೇಹ ಗುರುತು ಸಿಗದಷ್ಟು ಸುಟ್ಟಿರುವ ಕಾರಣ, ಮಕ್ಕಳ ರಕ್ತದ ಮಾದರಿ ಪಡೆದು ಡಿಎನ್ಎ ಹೋಲಿಕೆ ಮಾಡಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಅವಶೇಷಗಳನ್ನು ಕುಟುಂಬಕ್ಕೆ ಹಸ್ತಾಂತರಿಸದಿರಲು ಪೊಲೀಸರು ತೀರ್ಮಾನಿಸಿದ್ದಾರೆ.
ಸ್ಥಳದಲ್ಲಿ ಸಿಕ್ಕ ಕಾರು ಮತ್ತು ದೇಹ ಪೂರ್ಣ ಸುಟ್ಟಿದೆ. ಮೃತದೇಹ ಸಂಕೋಳ್ ಅವರದ್ದೇ ಆಗಿದ್ದರೂ ಕಾನೂನಾತ್ಮಕವಾಗಿ ಡಿಎನ್ಎ ವರದಿ ಅನಿವಾರ್ಯವಾಗಿದೆ.
ಚಂದ್ರಶೇಖರ್ ಸಂಕೋಳ್, ರಾಜಕೀಯ ಮತ್ತು ಉದ್ಯಮದಲ್ಲಿದ್ದರು. ತೀವ್ರ ನಷ್ಟ ಮತ್ತು ಕೋಟ್ಯಂತರ ರೂಪಾಯಿ ಸಾಲ ಅವರನ್ನು ಆರ್ಥಿಕ ಸಂಕಷ್ಟದಲ್ಲಿದ್ದರು. ಆಸ್ತಿ ಮಾರಾಟ ಮಾಡುವ ವಿಚಾರದಲ್ಲಿ ಮನೆಯಲ್ಲಿ ಅಸಮಾಧಾನವಿತ್ತು. ಜ.10ರಂದು ತಂದೆ ಜೊತೆ ಜಗಳವಾಡಿದ್ದ ಪುತ್ರಿ ಹಾಗೂ ಪುತ್ರ ಸಹ ಆತ್ಮಹತ್ಯೆಗೆ ಯತ್ನಿಸಿದ್ದರು.ಇಬ್ಬರು ಮಕ್ಕಳು ಪ್ರಸ್ತುತ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಆಘಾತದಿಂದಲೇ ಚಂದ್ರಶೆಖರ್ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಢಿದ್ದಾರೆ ಎನ್ನಲಾಗುತ್ತಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



