ದಾವಣಗೆರೆ : ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಹಾಗೂ ಲ್ಯಾಪ್ಟಾಪ್ ಕಳವು ಮಾಡಿದ್ದ ಆರೋಪಿಯನ್ನು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಭದ್ರಾ ಜಲಾಶಯ; ಜ.3ರಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಹರಿಸಲು ತೀರ್ಮಾನ
ಬಂಧಿತನಿಂದ 3.43 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಳ್ಳುವಲ್ಲಿ ಜಿಆರ್ಪಿ ಹಾಗೂ ಆರ್ಪಿಎಫ್ ಪೊಲೀಸರ ತಂಡ ಯಶಸ್ವಿಯಾಗಿದೆ. ಮೊಹಮ್ಮದ್ ಅಮ್ಜದ್ ಬಂಧಿತ ಆರೋಪಿ. ಕಳೆದ ಡಿಸೆಂಬರ್ 21ರಂದು ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯ ಎಂ. ವಿನಯ್ ಪ್ರಯಾಣಿಸುತ್ತಿದ್ದರು. ರಾತ್ರಿ ವೇಳೆ ವಿನಯ್ ನಿದ್ರೆಯಲ್ಲಿದ್ದಾಗ ಆರೋಪಿ, ಅವರ ಬಳಿಯಿದ್ದ ಚಿನ್ನಾಭರಣ, ಲ್ಯಾಪ್ಟಾಪ್ ಹಾಗೂ ಮೊಬೈಲ್ ಕಳವು ಮಾಡಿದ್ದನು. ಎಚ್ಚರವಾದ ವಿನಯ್ ಕಳವು ಅರಿತು ಕೂಡಲೇ ಆನ್ಲೈನ್ ಮೂಲಕ ಆರ್ಪಿಎಫ್ಗೆ ದೂರು ನೀಡಿದ್ದರು.
ದಾವಣಗೆರೆ: ಮತ್ತೆ ಅಡಿಕೆ ಬೆಲೆ ಮತ್ತೆ ಏರಿಕೆ; 59 ಸಾವಿರದತ್ತ ಅಡಿಕೆ ದರ
ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಪರೇಷನ್ ಯಾತ್ರಿ ಸುರಕ್ಷಾ ಅಡಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು. ಮಧ್ಯರಾತ್ರಿ 1.20 ಗಂಟೆಗೆ ರೈಲು ದಾವಣಗೆರೆ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಜಿಆರ್ಪಿ ಇನ್ಸ್ಪೆಕ್ಟರ್ ಕೃಷ್ಣ ನಾಯಕ್ ಹಾಗೂ ಆರ್ಪಿಎಫ್ ಇನ್ಸ್ಪೆಕ್ಟರ್ ರಂಜನ್ ಕುಮಾರ್ ಭಾರಧ್ವಜ್ ನೇತೃತ್ವದ ತಂಡ ರೈಲನ್ನು ಜಾಲಾಡಿತು. ಈ ವೇಳೆ ಸಂಶಯಾಸ್ಪದವಾಗಿ ಕಂಡುಬಂದ ಮೊಹಮ್ಮದ್ ಅಮ್ಜದ್ನನ್ನು ತೀವ್ರ ತಪಾಸಣೆಗೊಳಪಡಿಸಿದಾಗ ಕಳವು ಮಾಡಿದ್ದ ವಸ್ತುಗಳು ಪತ್ತೆಯಾಗಿವೆ.
ನಂತರ ಆರೋಪಿಯನ್ನು ಬಂಧಿಸಿ ಜಿಆರ್ಪಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಎ. ಕೆ. ರೆಡ್ಡಿ, ಜಿಆರ್ಪಿ ಎಎಸ್ ಐ ಜಾನ್ ಕೊರಿಯೋ ಕೂಸ್, ಮುಖ್ಯ ಪೇದೆ ಟಿ. ಶಿವಾನಂದ ಹಾಗೂ ಸಿಬ್ಬಂದಿಗಳಾದ ದಿನೇಶ್ ಕುಮಾರ್, ಚೇತನ್, ಕಿರಣ್ ಮತ್ತು ಮಾಂತೇಶ್ ಪಾಲ್ಗೊಂಡಿದ್ದರು.



