ದಾವಣಗೆರೆ: ಮಹಿಳೆ ಸರ ಸುಲಿಗೆ ಮಾಡಿದ ಇಬ್ಬರು ಆರೋಪಿಗಳ ಬಂಧನ; 1.80 ಲಕ್ಷ ಮೌಲ್ಯದ ಮಾಂಗಲ್ಯ ಸರ ವಶದಾವಣಗೆರೆ: ಮಹಿಳೆ ಸರ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 1,80,000 ರೂ ಮೌಲ್ಯದ ಮಾಂಗಲ್ಯ ಸರ ವಶಕ್ಕೆ ಪಡೆಯಲಾಗಿದೆ.
ಡಿಸೆಂಬರ್ 16ರಂದು ಚನ್ನಗಿರಿ ತಾಲ್ಲೂಕಿನ ಅರಿಶಿನಘಟ್ಟ ಗ್ರಾಮದ ಸರೋಜಮ್ಮ ತಮ್ಮ ಪತಿ ಪಂಚಾಕ್ಷರಿಯೊಂದಿಗೆ ಬಸವಾಪಟ್ಟಣ ಗ್ರಾಮದ ಶ್ರೀ ದುರ್ಗಮ್ಮ ದೇವಸ್ಥಾನಕ್ಕೆ ಬೈಕ್ ಬಂದು ಪೂಜೆ ಮುಗಿಸಿಕೊಂಡು ಸೂಳೆಕೆರೆ ಮಾರ್ಗವಾಗಿ ತಮ್ಮ ಗ್ರಾಮಕ್ಕೆ ವಾಪಾಸ್ ಹೋಗುತ್ತಿದ್ದರು. ಈ ವೇಳೆ ಮಧ್ಯಾಹ್ನ ಸೂಳೆಕರೆಯ ತೂಗು ಸೇತುವೆ ದಾಟಿದ ನಂತರ ಕೊರಳಲ್ಲಿ ಬಂಗಾರದ ಚೈನ್ ಗೆ ಯಾರೋ ಕೈ ಹಾಕಿ ಕಿತ್ತುಕೊಂಡು ಹೋಗಿದ್ದಾರೆ. ಈ ಸಂಬಂಧ ಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಎಎಸ್ಪಿ ಪರಮೇಶ್ವರ ಹೆಗಡೆ ಹಾಗೂ ಡಿವೈಎಸ್ಪಿ ಸ್ಯಾಮ್ ವರ್ಗಿಸ್ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಆರ್. ಚೌಬೆ. ಸಿಪಿಐ ಸಂತೆಬೇನ್ನೂರು ವೃತ್ತ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡ ಎ1 ನಿಯಾಜ್ ಅಹಮದ್.ಎಂ, ಎ2 ರಾಜು ಸರಗಳ್ಳತನ ಪ್ರಕರಣದಲ್ಲಿ ದಸ್ತಗಿರಿ ಮಾಡಲಾಗಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಕೆಟಿಎಂ ಬೈಕ್ ಹಾಗೂ ಸರಕಳ್ಳತನ ಮಾಡಿದ್ದ ಒಟ್ಟು 1,80,000/- ರೂ ಬೆಲೆ ಬಾಳುವ 14 ಗ್ರಾಂ ಕಟ್ಟಾದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರುಗಳನ್ನು ಬಂಧಿಸಿನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತದೆ.
ಆರೋಪಿತರುಗಳನ್ನು ಪತ್ತೆ ಮಾಡಿ ಸರಗಳ್ಳತನ ಪ್ರಕರಣದಲ್ಲಿ ಸುಮಾರು ರೂ 1,80,000/- ರೂ ಮೌಲ್ಯದ ಬೆಲೆ ಬಾಳುವ 14 ಗ್ರಾಂ ಬಂಗಾರದ ಸರವನ್ನು ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



