ದಾವಣಗೆರೆ: ಪ್ರಯಾಣಿಕರ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ಅನಧಿಕೃತವಾಗಿ ಬದಲಾವಣೆ (ವಿನ್ಯಾಸ) ಮಾಡಿರುವ ಆಟೋಗಳ ವಿರುದ್ಧ ಜಿಲ್ಲಾ ಪೊಲೀಸರು (Police) ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಆಟೋಗಳಲ್ಲಿ ಅಳವಡಿಸಿದ್ದ ಅನಧಿಕೃತ ವಿನ್ಯಾಸಗಳ ತೆರವು ಮಾಡಿ, ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ: ತುಂತುರು ನೀರಾವರಿ- ಶೇ. 90ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ
ಪೊಲೀಸ್, ಸಾರಿಗೆ ಇಲಾಖೆ ಜಂಟಿ ಕಾರ್ಯಾಚರಣೆ
ನಗರದ ಡಿಎಆರ್ ಮೈದಾನದಲ್ಲಿ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ದಕ್ಷಿಣ-ಉತ್ತರ ಸಂಚಾರ ಪೊಲೀಸ್ ಸಿಬ್ಬಂದಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದರು.
ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ; ಕೆಲವೆಡೆ ಮೋಡ ಕವಿದ ವಾತಾವರಣ
ಏನು ಉಲ್ಲಂಘನೆ..?
ಆಟೋದ ಹಿಂದೆ ಹೆಚ್ಚುವರಿಯಾಗಿ ಕಬ್ಬಿಣದ ಸರಳು ಅಳವಡಿಸುವುದು, ಡ್ರೈವರ್ ಸೀಟ್‌ನಲ್ಲಿ ಕುಷನ್ ಹಾಕಿ ನಾಲ್ಕು ಜನ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ನಗರದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅನಧಿಕೃತ ಬದಲಾವಣೆ ಕಟ್
ದಾವಣಗೆರೆ ನಗರದಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗಿದ್ದು, ಆಟೋ ಚಾಲಕರ ಸಂಘಟನೆಗಳು ಈ ಬಗ್ಗೆ ಎಸ್ಪಿ, ಜಿಲ್ಲಾಧಿಕಾರಿ ಹಾಗೂ ಆರ್‌ಟಿಓ ಅವರಿಗೆ ದೂರು ನೀಡಿದ್ದವು. ಹೀಗಾಗಿ ಅನಧಿಕೃತ ಬದಲಾವಣೆ ಮಾಡಿದ ಆಟೋಗಳನ್ನು ಗುರುತಿಸಿ, ಗ್ಯಾಸ್ ಕಟರ್ ಬಳಸಿ ಆ ಭಾಗಗಳನ್ನು ಕಟ್ ಮಾಡಿ ತೆಗೆದು ಹಾಕಲಾಯಿತು.
ಆಟೋಗಳ ವಿಶಿಷ್ಟ ಡಿಸೈನ್‌ಗಳು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವಂತಿದೆ. ಆಟೋ ಒಳಗೆ ಸ್ವಲ್ಪ ಜಾಗದಲ್ಲಿ ಕುಷನ್ ವರ್ಕ್ ಮಾಡಿಸಿ, ಸೈಡ್‌ಗೆ ಕಾಲು ಇಟ್ಟುಕೊಳ್ಳಲು ಕಬ್ಬಿಣದ ಸರಳುಗಳನ್ನು ಹಾಕಲಾಗಿದೆ. ಎಂಜಿನ್ ರಿಪೇರಿ ಸುಲಭವಾಗಲಿ ಎಂದು ಕಂಪನಿ ಡಿಸೈನ್ ಮಾಡಿದರೂ, ಚಾಲಕರು ತಮ್ಮದೇ ಆದ ಬದಲಾವಣೆ ಮಾಡಿದ್ದರು.
ಇದೇ ವೇಳೆ ಸಂಚಾರ ನಿಯಮ ಉಲ್ಲಂಘನೆ, ಸಿಗ್ನಲ್ ಜಂಪ್ ಮತ್ತು ನಂಬರ್ ಪ್ಲೇಟ್‌ಗಳಿಗೆ ಕುಚ್ಚು ಕಟ್ಟುವುದು ಮುಂತಾದ ನಿಯಮ ಉಲ್ಲಂಘನೆಗಳು ಸಹ ಕಂಡು ಬಂದಿವೆ. ಈ ಹಿಂದೆ 2-3 ಸಲ ಇಂತಹ ಆಟೋಗಳನ್ನು ಹಿಡಿದು ಎಚ್ಚರಿಕೆ ನೀಡಲಾಗಿತ್ತು, ಆದರೆ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲ ವೇಳೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಡಿವಿಜಿ ನಂಬರ್‌ಗೆ ಮತ್ತೆ ಚಾಲನೆ ನೀಡಲಾಯಿತು.



