ದಾವಣಗೆರೆ: ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತಳಿಗೆ ವಿವಾಹ ಮಾಡುತ್ತಿದ್ದಾರೆ ಎಂದು 112 ಹೊಯ್ಸಳಕ್ಕೆ ಕರೆ ಬಂದಿದ್ದು, ಕೂಡಲೇ ಘಟನಾ ಸ್ಥಳಕ್ಕೆ 112 ಕರ್ತವ್ಯ ಅಧಿಕಾರಿಗಳು ಭೇಟಿ ನೀಡಿ ಬಾಲ್ಯ ವಿವಾಹ ತಡೆಗಟ್ಟಿದ್ದಾರೆ.
ಅಪ್ರಾಪ್ತ ಸಂತ್ರಸ್ತೆಗೆ ವಿವಾಹ ಮಾಡಲು ಸಿದ್ದತೆ ನಡೆಸಿರುವುದು ಕಂಡುಬಂದಿದ್ದು, ಅಪ್ರಾಪ್ತ ಸಂತ್ರಸ್ತೆಯ ಪೋಷಕರಿಗೆ ಬಾಲ್ಯ ವಿವಾಹ ಮಾಡುವುದು ಕಾನೂನು ಬಾಹಿರವಾಗಿರುತ್ತದೆ. ಅಪ್ರಾಪ್ತರಿಗೆ ವಿವಾಹ ಮಾಡಬಾರದೆಂದು ಸೂಕ್ತ ತಿಳುವಳಿಕೆ ನೀಡಿದ್ದು, ನಂತರ ದಾವಣಗೆರೆ ಜಿಲ್ಲೆಯ ACDPO ಅಧಿಕಾರಿಗಳಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ಕರೆಯಿಸಿ ಮುಂದಿನ ಕ್ರಮಕ್ಕೆ ಸದರಿ ಅಪ್ರಾಪ್ತ ಸಂತ್ರಸ್ತೆಯನ್ನು ವಶಕ್ಕೆ ನೀಡಲಾಗಿದೆ.
ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಘಟನಾ ಸ್ಥಳಕ್ಕೆ ಬೇಟಿ ನೀಡಿ ಬಾಲ್ಯ ವಿವಾಹವನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ 112 ಕರ್ತವ್ಯದಲ್ಲಿದ್ದ ಮಹಿಳಾ ಹೆಡ್ ಕಾನ್ಸ್ಟೇಬಲ್ ಸವಿತಾ ಹಾಗೂ ಚಾಲಕರಾದ ಸಿದ್ದೇಶ್ ಪುಟಗನಾಳ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.



