ದಾವಣಗೆರೆ: ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಹರಿಹರ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 16,52,000/- ರೂ (ಹದಿನಾರು ಲಕ್ಷದ ಐವತ್ತೇರೆಡು ಲಕ್ಷ) ಮೊತ್ತದ ವಿವಿಧ ಕಂಪನಿಗಳ 30 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ದಾಖಲು: ಹರಿಹರೇಶ್ವರ ಲೇಔಟ್ ಶ್ರೀಜಿತ್.ಆರ್ ದಿನಾಂಕ: 26-05-2025 ರಂದು, ಶಾಬಾಜ್ ಇಂದಿರಾ ನಗರರವರು ದಿನಾಂಕ: 13-06-2025 ರಂದು, ಮಂಜುನಾಥ ವಿದ್ಯಾನಗರ ದಿನಾಂಕ: 24-06-2025 ರಂದು, ನಿತೀಶ್, ವಿದ್ಯಾನಗರ ರವರು ದಿನಾಂಕ: 31-07-2025 ರಂದು ತಮ್ಮ ದ್ವಿಚಕ್ರ ವಾಹನಗಳು ಕಳ್ಳತನವಾದ ಬಗ್ಗೆ ದೂರು ನೀಡಿದ್ದು ಕ್ರಮವಾಗಿ ಹರಿಹರ ನಗರ ಠಾಣೆಯಲ್ಲಿ ದೂರಿ ದಾಖಲಿಸಿದ್ದರು.
ಆರೋಪಿಗಳ ಪತ್ತೆ ಕಾರ್ಯಕ್ಕೆ ತಂಡ ರಚನೆ
ಬೈಕ್ ಕಳ್ಳತನ ಪ್ರಕರಣಗಳಲ್ಲಿನ ಸ್ವತ್ತು ಹಾಗೂ ಆರೋಪಿತರನ್ನು ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ಹಾಗೂ ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಿ.ಎಸ್.ಬಸವರಾಜ್ ಮಾರ್ಗದರ್ಶನದಲ್ಲಿ ಹರಿಹರ ನಗರ ಠಾಣೆ ಪೊಲೀಸ್ ನಿರೀಕ್ಷಕ ಆರ್.ಎಫ್.ದೇಸಾಯಿ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಪ್ರಕರಣದ ಆರೋಪಿಗಳ ಪತ್ತೆ, ಸ್ವತ್ತು ವಶ
ಸದರಿ ಬೈಕ್ ಕಳ್ಳತನದಲ್ಲಿನ ಆರೋಪಿತರ ಪತ್ತೆಗಾಗಿ ಕಾರ್ಯಚರಣೆ ಕೈಗೊಂಡ ಪತ್ತೆ ಕಾರ್ಯ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತಾಂತ್ರಿಕ ಹಾಗೂ ಬೌತಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೈಕ್ ಕಳ್ಳರ ಜಾಡು ಪತ್ತೆ ಹಚ್ಚಿ ದಿನಾಂಕ: 17-10-2025 ರಂದು ಹರಿಹರ ನಗರದ ಹರಪನಹಳ್ಳಿ ರಸ್ತೆಯಲ್ಲಿ ಆರೋಪಿತರಾದ 1] ಪ್ರತಾಪ ತಂದೆ ಲಚ್ಚಾನಾಯ್ಕ್, ದೊಡ್ಡಲಿಂಗೇನಹಳ್ಳಿ ಗ್ರಾಮ, ತರಿಕೆರೆ ತಾಲೂಕ್, ಚಿಕ್ಕಮಗಳೂರು ಜಿಲ್ಲೆ 2] ಬೋಜರಾಜ್ ತಂದೆ ಮಂಜುನಾಥ ಗದ್ದಿಕೆರೆ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲೂಕ್, ಬಳ್ಳಾರಿ ಜಿಲ್ಲೆ ಇವರು ಕಳ್ಳತನ ಮಾಡಿದ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ವಿಚಾರಣೆ ಮಾಡಿದಾಗ ಪ್ರಕರಣಗಳು ಬೆಳಕಿಗೆ ಬಂದಿದ್ದು ಆರೋಪಿತರಿಂದ ಒಟ್ಟು 16,52,000/-ರೂ ಬೆಲೆಯ ವಿವಿಧ ಕಂಪನಿಯ ಒಟ್ಟು 30 ದ್ವಿಚಕ್ರ ವಾಹನಗಳು ಪತ್ತೆಯಾಗಿರುತ್ತವೆ.
ಆರೋಪಿಗಳ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಈ ಹಿಂದೆ ಬಂಧನವಾಗಿರುತ್ತಾರೆ. ಪತ್ತೆ ಕಾರ್ಯ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ಶ್ಲಾಘಿಸಿದ್ದಾರೆ.



