Connect with us

Dvgsuddi Kannada | online news portal | Kannada news online

ದಾವಣಗೆರೆ: ಅಕ್ರಮ ಮರಳು ಸಾಗಾಟ; ಮರಳು ತುಂಬಿದ ಮೂರು ಲಾರಿ ಜಪ್ತಿ- ಮೂರು ಆರೋಪಿಗಳ ವಶ

ದಾವಣಗೆರೆ

ದಾವಣಗೆರೆ: ಅಕ್ರಮ ಮರಳು ಸಾಗಾಟ; ಮರಳು ತುಂಬಿದ ಮೂರು ಲಾರಿ ಜಪ್ತಿ- ಮೂರು ಆರೋಪಿಗಳ ವಶ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನಲ್ಲೂರಿನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದ 3 ಲಾರಿ ಮತ್ತು ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಲಿಂಗದಹಳ್ಳಿ ಕಡೆಯಿಂದ ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಮರಳು ಸಾಗಾಟ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ 30 ಲಕ್ಷ ಬೆಲೆ ಬಾಳುವ ಮೂರು ಲಾರಿ, 75 ಸಾವಿರ ಬೆಲೆಯ ಮರಳು ಹಾಗೂ ಮೂವರು ಆರೋಪಿಗಳನ್ನು ಚನ್ನಗಿರಿ ಉಪ ವಿಭಾಗದ ಡಿವೈಎಸ್ ಪಿ ಡಾ. ಸಂತೋಷ್ ನೇತೃತ್ವದಲ್ಲಿ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.  ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top