ದಾವಣಗೆರೆ: ಮದ್ಯ ಕುಡಿಯೋದಕ್ಕೆ ಹಣ ಕೊಡದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ತಲೆ ಮೇಲೆ ಕಲ್ಲು ಎತ್ತಿಹಾಕಿ ಪುತ್ರ ನರಸಿಂಹಪ್ಪ(46) ತಂದೆ ಮಂಜಪ್ಪ(65) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನರಸಿಂಹಪ್ಪ ಮನೆಗೆ ಬಂದು ಹಣ ನೀಡುವಂತೆ ಪೀಡಿಸಿದ್ದಾನೆ. ನನ್ನ ಬಳಿ ದುಡ್ಡಿಲ್ಲ , ಊಟ ಮಾಡು ಎಂದು ಹೇಳಿದ್ದಕ್ಕೆ ಮಂಜಪ್ಪನನ್ನು ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



