ದಾವಣಗೆರೆ: ಕಾನೂನು ಬಾಹಿರವಾಗಿ ಕೋಳಿ ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ ಮಾಡಿದ್ದು, ಒಟ್ಟು ಮೂರು ಜೀವಂತ ಕೋಳಿಗಳು, 33,700 ರೂ. ನಗದು ಹಣ, 7 ಮೊಬೈಲ್ ಗಳು, 4 ಬೈಕ್ ವಶಪಡಿಸಿಕೊಳ್ಳಲಾಗಿದೆ.
ದಿನಾಂಕ: 27-05-2025 ರಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾ. ಸದಾಶಿವಪುರ ಗ್ರಾಮದ ಸಮೀಪ ಜಮೀನುಗಳಿಗೆ ಹೋಗುವ ಸಾರ್ವಜನಿಕ ಕಚ್ಚಾ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಜೂಜಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆದಿದೆ. ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ್, ಜಿ ಮಂಜುನಾಥ ಹಾಗೂ ಡಿವೈಎಸ್ಪಿ ಸ್ಯಾಮ್ ವರ್ಗೀಸ್, ಹೊನ್ನಾಳಿ ಪೊಲೀಸ್ ನೀರೀಕ್ಷಕ ಸುನೀಲ್ ಕುಮಾರ ಮಾರ್ಗದರ್ಶನದಲ್ಲಿ ಹೊನ್ನಾಳಿ ಠಾಣೆಯ ಪಿ ಎಸ್ ಐ ಕುಮಾರ ಎನ್ ಮತ್ತು ಸಿಬ್ಬಂದಿಗಳ ತಂಡ ಜೂಜಾಟ ಸ್ಥಳದ ಮೇಲೆ ದಾಳಿ ಮಾಡಿದೆ.
ಕಾನೂನು ಬಾಹಿರವಾಗಿ ಕೋಳಿ ಜೂಜಾಟದಲ್ಲಿ ತೊಡಗಿದ್ದ ಆರೋಪಿತರುಗಳಾದ 1) ಅವಿನಾಶ್ (28), ಉಜ್ಜನಿಪುರ ಗ್ರಾಮ ಹೊನ್ನಾಳಿ ತಾ. 2) ಯುವರಾಜನಾಯ್ಕ್ (29), ಉಜ್ಜನಿಪುರ ಗ್ರಾಮ ಹೊನ್ನಾಳಿ ತಾ. 3) ನೀಲಕಂಠೇಶ್ವರ (42), ಯರವನಾಗತಿಗಹಳ್ಳಿ, ದಾವಣಗೆರೆ ತಾ. 4) ಮೋಹನ (32), ಶಿರಮಗೊಂಡನಹಳ್ಳಿ, ದಾವಣಗೆರೆ ತಾ. 5) ಮಂಜುನಾಥ (46) , ಜರೇಕಟ್ಟೆ ಗ್ರಾಮ, ದಾವಣಗೆರೆ ತಾ., 6) ಶ್ರೀನಿವಾಸ (48), ತ್ಯಾವಣಿಗೆ ಗ್ರಾಮ, ಚನ್ನಗಿರಿ ತಾ. 7) ಶ್ರೀನು (48 ) ತ್ಯಾವಣಿಗೆ ಗ್ರಾಮ, ಚನ್ನಗಿರಿ ತಾ. 8) ಸಾಯಿತೇಜರೆಡ್ಡಿ @ ಪಾಂಡು ಇವರನ್ನು ಬಂಧನ ಮಾಡಲಾಗಿದೆ.
ಕೋಳಿ ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 03 ಜೀವಂತ ಕೋಳಿಗಳು, 33,700/- ರೂ ನಗದು ಹಣ, 07 ಮೊಬೈಲ್ ಗಳು, 04 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



