ದಾವಣಗೆರೆ; ವಿದ್ಯಾನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 7.30 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ದಿನಾಂಕ 29.04.2025 ಮಹಾಂತೇಶ ಎಂಬುವವರು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ದಿನಾಂಕ 19-04-2025 ರಂದು ಟೈಲ್ಸ್ ಕೆಲಸ ಮಾಡಲು ಹಿರಿಯೂರಿನ ಸಮುದ್ರದಹಳ್ಳಿ ಗ್ರಾಮಕ್ಕೆ ಹೋಗಿದ್ದು ನಂತರ ದಿ:29.04.2025 ರಂದು ಮದ್ಯಾಹ್ನ 2.30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಬೀಗ ಮುರಿದಿತ್ತು. ಮನೆಯ ಒಳಗೆ ಹೋಗಿ ನೋಡಿದಾಗ ಮನೆಗೆ ಬೀರುವಿನಲ್ಲಿ ಇಟ್ಟಿದ್ದ ಬಟ್ಟೆ ಬರೆಗಳೆಲ್ಲ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು,ಯಾರೋ ಕಳ್ಳರು ಮನೆಯ ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಸುಮಾರು 35 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಅಂತ ನೀಡಿದ ದೂರಿನಲ್ಲಿ ತಿಳಿಸಿದ್ದರು.
ಆರೋಪಿ ಪತ್ತೆ ಮಾಡಲು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ.ಎಂ. ಸಂತೋಷ್, ಜಿ..ಮಂಜುನಾಥ , ಡಿವೈಎಸ್ಪಿ ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊಂಡ ತಂ ಕಾರ್ಯಾಚರಣೆ ನಡೆದಿದೆ. ಈ ತಂಡ ದಿನಾಂಕ: ಪ್ರಕರಣದ ಆರೋಪಿಗಳಾದ 1)ಪ್ರದೀಪ್ @ ಕರಿಯಾ (29) ಶಾಂತಿ ನಗರ, ದಾವಣಗೆರೆ, 2) ಮಣಿಕಂಠ (28) , ವಾಸ ನಿಜಲಿಂಗಪ್ಪ ಬಡಾವಣೆ ದಾವಣಗೆರೆ 3 *) ಸಂಜಯ ಎನ್ (23) ಯಲ್ಲಮ್ಮ ನಗರ, ದಾವಣಗೆರೆ ಇವರುಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ವಿದ್ಯಾ ನಗರ ಪೊಲೀಸ್ ಠಾಣೆ ಹಾಗೂ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಬಂಗಾರದ ಆಭರಣ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಇಬ್ಬರು ಆರೋಪಿತರು ತಲೆ ಮರೆಸಿಕೊಂಡಿದ್ದು ಪತ್ತೆಯಾಗಬೇಕಾಗಿರುತ್ತದೆ. ಮೇಲ್ಕಂಡ ಒಟ್ಟು 03 ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 7,00,000/-ರೂ ಬೆಲೆಯ 87 ಗ್ರಾಂ ತೂಕದ ಬಂಗಾರದ ಆಭರಣ 30,000/-ರೂ ಬೆಲೆಯ 404 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.