ದಾವಣಗೆರೆ; ಕುಖ್ಯಾತ ರೌಡಿಶೀಟರ್ ಕಣುಮ (ಸಂತೋಷ್ ಕುಮಾರ್) ಹ*ತ್ಯೆ ಪ್ರಕರಣದ 10 ಮಂದಿ ಆರೋಪಿಗಳು ಹೊಳಲ್ಕೆರೆ ಠಾಣೆ ಪೊಲೀಸರ ಎದುರುಶರಣಾಗಿದ್ದಾರೆ. ಈ ಮೂಲಕ ದಾವಣಗೆರೆ ರೌಡಿಶೀಟರ್ ಹ*ತ್ಯೆ ನಡೆದು 24 ತಾಸಿನಲ್ಲಿ ಬಂಧನ ಮಾಡಲಾಗಿದೆ. ಪ್ರಕರಣ ಸಂಬಂಧ 12 ಜನರ ವಿರುದ್ಧ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಕಣುಮನ ಆಪ್ತರಿಂದಲೇ ಕೊ*ಲೆ
ಕಣುಮ ಪತ್ನಿ ಶೃತಿ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಕಾರ್ತಿಕ್(22), ಚವಳಿ ಸಂತು(30), ನವೀನ್(26) ನವೀನ್(26), ಗುಂಡಪ್ಪ(32), ಬಸವರಾಜ್(22), ಹನುಮಂತಪ್ಪ(23), ಗಿಡ್ಡ ವಿಜಿ(27), ಚಿಕ್ಕಮ್ಮನಹಳ್ಳಿ ಶಿವು(30), ಕಡ್ಡಿ ರಾಘು(27), ಪ್ರಶಾಂತ್ (28) ಮತ್ತು ನಿಟ್ಟುವಳ್ಳಿಯ ಗಣಿ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೊ*ಲೆ ಮಾಡಿದ ಎಲ್ಲಾ ಆರೋಪಿಗಳು 22 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಈ ಎಲ್ಲಾ ಆರೋಪಿಗಳು ಕಣುಮನ ಆಪ್ತರಾಗಿದ್ದಾರೆ.
ಮಾರಿಕಣವಿ ನಿವಾಸಿ
ಸೋಮವಾರ ದಾವಣಗೆರೆಯ ಸೋಮೇಶ್ವರ ಆಸ್ಪತ್ರೆ ಬಳಿಯ ಕ್ಲಬ್ ವೊಂದರಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕಣುಮನನ್ನು ಹ*ತ್ಯೆಗೈದಿದ್ದರು. ಕಣುಮ ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರ ಬಳಿಯ ಮಾರಿ ಕಣವಿ ನಿವಾಸಿಯಾಗಿದ್ದನು. ಸಂತೋಷ ಕುಮಾರ್ ತಾಯಿ ಊರು ದಾವಣಗೆರೆ. ಹೀಗಾಗಿ ದಾವಣಗೆರೆಯಲ್ಲಿ ನೆಲೆಸಿದ್ದರು. ಪ್ರಾರಂಭದ ದಿನಗಳಲ್ಲಿ ಸೊಪ್ಪು ಮಾರುತ್ತಿದ್ದ ಕಣುಮ, ನಂತರ, ರೌಡಿಸಂಗೆ ಇಳಿದು ರಿಯಲ್ ಎಸ್ಟೇಟ್ ನಲ್ಲಿ ತೊಡಗಿಕೊಂಡಿದ್ದನು. ಇದೇ ಕುಣುಮ ರೌಡಿಶೀಟರ್ ಗಳಾದ ಬುಳ್ಳ್ ನಾಗಾ, ಯೋಗಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದನು.