ದಾವಣಗೆರೆ: ಒಂದೇ ದಿನ ಆರು ಕಡೆ ಸರಣಿ ಮನೆ ಕಳ್ಳತನ ಮಾಡಿದ್ದ, ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 6.36 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
- ವಶಪಡಿಸಿಕೊಂಡ ವಸ್ತುಗಳ ವಿವರ
- 3,03,000/- ರೂ ಬೆಲೆಯ 49.93 ಗ್ರಾಂ ಚಿನ್ನ
- 88,000/- ರೂ ಮೌಲ್ಯದ 760.29 ಗ್ರಾಂ ಬೆಳ್ಳಿ
- 18,600/- ರೂ ಬೆಲೆ 02 ಮೊಬೈಲ್ ಫೋನ್
- 15,000/- ರೂ ಬೆಲೆ ಒಂದು ತಾಮ್ರದ ಹಂಡೆ
- 12,000/- ರೂ ಬೆಲೆಯ 06 ಖಾಲಿ ಸಿಲಿಂಡರ್
- 80,000/- ರೂ ನಗದು ಹಣ
- ಕೃತ್ಯಕ್ಕೆ ಬಳಸಿದ 1,20,000/- ರೂ ಮೌಲ್ಯದ 02 ಬೈಕ್
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಎಲೆಬೇತೂರು ಗ್ರಾಮದಲ್ಲಿ ದಿನಾಂಕ:22/02/2025 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಎಲೆ ಬೇತೂರು ಗ್ರಾಮದ ಪೂರ್ಣಿಮಾ ಎಂಬುವವರ ಮನೆಯ ಬಾಗಿಲ ಬೀಗ ಮುರಿದು ನಗದು ಹಣ ಮತ್ತು ವಡವೆಗಳು ಕಳ್ಳತನ ಮಾಡಿದ್ದಾರೆ ಎಂದು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಸಿದ್ದರು.
16 ಸಾವಿರ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆಯಿಂದ ಒಪ್ಪಿಗೆ; ಶಿಕ್ಷಣ ಸಚಿವ ಮಧುಬಂಗಾರಪ್ಪ
ಈ ಕಳ್ಳತನ ನಡೆದ ದಿನದಂದು ಬಿಳಿಚೋಡು ಪೊಲೀಸ್ ಠಾಣೆಯ ಮುಗ್ಗಿದರಾಗಿ ಹಳ್ಳಿ ಗ್ರಾಮದಲ್ಲಿ ಸರಣಿಯಾಗಿ 05 ಮನೆಗಳಲ್ಲಿ ಕಳ್ಳತನ ನಡೆದಿದ್ದು ಈ ಬಗ್ಗೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮಾ.25 ರಂದು ಉದ್ಯೋಗಮೇಳ
ಮೇಲ್ಕಂಡ ಪ್ರಕರಣಗಳಲ್ಲಿ ಆರೋಪಿ ಮತ್ತು ಮಾಲು ಪತ್ತೆ ಸಲುವಾಗಿ ದಾವಣಗೆರೆ ಜಿಲ್ಲೆ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ್ ರವರ & ಜಿ.ಮಂಜುನಾಥ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಸವರಾಜ ಬಿ ಎಸ್ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿಐ ಕಿರಣ್ ಕುಮಾರ್ ಇ.ವೈ ನೇತೃತ್ವದಲ್ಲ ಹಾರೂನ್ ಅಕ್ತರ್, ಪಿಎಸ್‌ಐ(ಕಾ ಮತ್ತು ಸು),ಜೋವಿತ್ ರಾಜ್, ಅಬ್ದುಲ್ ಖಾದರ್ ಜಿಲಾನಿ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಮೇಲ್ಕಂಡ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಕಾರ್ಯಾಚರಣೆ ನಡೆಸಿ ಕೃತ್ಯವೆಸಗಿದ್ದ ಆರೋಪಿ ಸಾದಿಕ್ ಎಸ್ (21) ವಾಸ:ಬೇತೂರು ರಸ್ತೆ, ಮುದ್ದಭೋವಿ ಕಾಲೋನಿ ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 5 ಪ್ರಕರಣಗಳಿಗೆ ಸಂಬಂಧಿಸಿದಂತೆ, ಒಟ್ಟು 3,03,000/- ರೂ ಬೆಲೆಯ 49.93 ಗ್ರಾಂ ತೂಕದ ಬಂಗಾರದ ಆಭರಣಗಳನ್ನು 88,000/- ರೂ ಮೌಲ್ಯದ 760.29 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು, 18,600/- ರೂ ಬೆಲೆ 02 ಮೊಬೈಲ್ ಫೋನ್, 15,000/- ರೂ ಬೆಲೆ ಒಂದು ತಾಮ್ರದ ಹಂಡೆ, 12,000/- ರೂ ಬೆಲೆಯ 06 ಖಾಲಿ ಸಿಲಿಂಡರ್ ಗಳನ್ನು, ಹಾಗೂ 80,000/- ರೂ ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 1,20,000/- ರೂ ಮೌಲ್ಯದ 02 ದ್ವಿ ಚಕ್ರ ವಾಹನಗಳನ್ನು ಹಾಗೂ ಒಂದು ಕಬ್ಬಿಣದ ರಾಡ್ ಸೇರಿದಂತೆ ಒಟ್ಟು 6,36,600/-ರೂ ಮೌಲ್ಯದ ವಸ್ತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿ ಮತ್ತು ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿರುತ್ತದೆ. ಆರೋಪಿತರಿಂದ ಒಟ್ಟು 09 ಪ್ರಕರಣಗಳು ಪತ್ತೆಯಾಗಿರುತ್ತವೆ. ಪ್ರಕರಣದ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.