ದಾವಣಗೆರೆ: ನಗರದ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆಯಾಗಿದೆ. ಕೆಟಿಜೆ ನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹದಡಿ ರಸ್ತೆಯ ಸೂರ್ಯ ಲಾಡ್ಜ್ ನಲ್ಲಿ ಈ ಜಾಲ ಪತ್ತೆಯಾಗಿದೆ.
ದಾವಣಗೆರೆ: ಮಹಿಳೆ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; 2.80 ಲಕ್ಷ ಮೊತ್ತದ ಚಿನ್ನಾಭರಣ ವಶ
ಈ ಪ್ರಕರಣದಲ್ಲಿ ಮೂವರು ಪುರುಷರನ್ನು ಬಂಧಿಸಲಾಗಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೆಟಿಜೆ ನಗರ ಸಿಪಿಐ ಸುನೀಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆದಿದೆ.
ದಾವಣಗೆರೆ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಸಹೋದರಿಯರು ಸೇರಿ ಮೂವರು ನೀರುಪಾಲು
ಈ ದಾಳಿ ವೇಳೆ ಇಬ್ಬರು ಮಹಿಳೆಯರು ಹಾಗೂ ಮೂವರು ಪುರುಷರು ಸಿಕ್ಕಿ ಬಿದ್ದಿದ್ದಾರೆ. ಲಾಡ್ಜ್ ನ ನಾಗರಾಜ್ ಎಂಬಾತನು ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.



