ದಾವಣಗೆರೆ: ಮನೆಗಳಿಗೆ ಕನ್ನ ಹಾಕುತ್ತಿದ್ದ ಬೆಂಗಳೂರಿನ ಗ್ಯಾಂಗ್ ನ ಇಬ್ಬರು ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 16 ಲಕ್ಷ ರೂ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಕುಶಾಲ್ ನಗರದ ಕೆ.ಜಿ.ಹಳ್ಳಿಯ ಸೂಫಿಯಾನ್ ಷರೀಫ್ ಅಲಿಯಾಸ್ ಮುಭಾರಕ್ ಮಮತ್ತು ಬೆಂಗಳೂರಿನ ರಾಜಗೋಪಾಲ್ ನಗರದ ಜಾವೀದ್ ಬಂಧೀತರು. ಆರೋಪಿಗಳು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ , ದಾವಣಗೆರೆ ವಿದ್ಯಾನಗರ ಠಾಣೆ, ಗಾಂಧಿನಗರ ಠಾಣೆಯ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಒಟ್ಟು 160 ಗ್ರಾಂ ತೂಕದ ಅಂದಾಜು ಬೆಲೆ ರೂ 12,80,000/ ಬೆಲೆಬಾಳುವ ಬಂಗಾರದ ಆಭರಣಗಳು, 1 ಕೆ.ಜಿ 600 ಗ್ರಾಂ ತೂಕ ಅಂದಾಜು ಬೆಲೆ ರೂ 1,35,000/- ಬೆಲೆ ಬಾಳುವ ಬೆಳ್ಳಿಯ ಸಾಮಾನುಗಳು ಮತ್ತು 43 ಇಂಚಿನ ಅಂದಾಜು ಬೆಲೆ ರೂ 35,000/- ಮಾಲ್ಯದ ಟಿ.ವಿ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 1.50.000/-ರೂ ಬೆಲೆಯ 02 ಬೈಕ್‌ಗಳು ಸೇರಿದಂತೆ ಒಟ್ಟು ಅಂದಾಜು ಮೊತ್ತ 16.00.000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ತನಿಖೆ ಮುಂದುವರಿದೆ.
ಹರಿಹರ ತಾಲ್ಲೂಕಿನ ಅಮರಾವತಿ ಕಾಲೋನಿಯ ವಾಸಿ ಜ್ಯೋಹಿತ್ ಡಿಸೋಜ್ ಎಂಬುವವರು 12.09.2024ರಂದು ತಮ್ಮ ಮನೆಯ ಕಿಟಕಿಯ ಸರಳನ್ನು ಕಟ್ ಮಾಡಿ ಒಳ
ಪ್ರವೇಶಿಸಿರುವ ಕಳ್ಳರು 10 ಗ್ರಾಂ ತೂಕದ 65 ಸಾವಿರರೂ ಬೆಲೆ ಬಂಗಾರದ ಆಭರಣ, ಟಿವಿಯನ್ನು ಕಳ್ಳತನ ಮಾಡಿರುವ ಬಗ್ಗೆ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯ್ ಕುಮಾರ್ ಸಂತೋಷ್, ಮಂಜುನಾಥ್ ಜಿ, ಡಿವೈಎಸ್ಪಿ ಬಸವರಾಜ ಬಿಎಸ್ ಅವರ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಸುರೇಶ್ ಸಗರಿ ಅವರ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಎಸ್ ಕುಪ್ಪೇಲೂರು, ಮಹಾದೇವ ಸಿದ್ದಪ್ಪ ಭತ್ತೆ ಹಾಗೂಸಿಬ್ಬಂದಿಗಳನ್ನೊಳಗೊಂಡ ತಂಡವು ಬೆಂಗಳೂರಿನ ಕುಶಾಲ್ ನಗರದ ಕೆ.ಜಿ.ಹಳ್ಳಿಯ ಸೂಫಿಯಾನ್ ಷರೀಫ್ ಅಲಿಯಾಸ್ ಮುಭಾರಕ್ ಮತ್ತು ಬೆಂಗಳೂರಿನ ರಾಜಗೋಪಾಲ್ ನಗರದ ಜಾವೀದ್ ಎಂಬುವವರನ್ನು ಬಂಧಿಸಿ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ, ವಿದ್ಯಾನಗರ ಠಾಣೆ, ಗಾಂಧಿ ನಗರ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳು, ಬೆಳ್ಳಿಯ ಸಾಮಾನುಗಳು, ಟಿವಿ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳು ಸೇರಿದಂತೆ ಒಟ್ಟು 16 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ರಮೇಶ ಜಿ.ಎನ್. ನೀಲಮೂರ್ತಿ, ದಾದಾಪೀರ್, ಬಸವನಗೌಡ, ಲಿಂಗರಾಜ, ಸತೀಶ್, ಪ್ರಸನ್ನಕಾಂತ, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಅರ್ಜುನ್ ರಾಯಲ್, ಗಂಗಾಧರ, ಸುರೇಶ ಉಪ್ಪಾರ, ನಾಗರಾಜ ಎನ್.ಎಸ್, ವೆಂಕಟೇಶ, ರಾಮಾಂಜನೇಯ, ಋಷಿರಾಜ, ಸಿದ್ದಪ್ಪ
ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಚೇರಿಯ ಮಂಜುನಾಥ ಎಸ್. ಕಲ್ಲೇದೇವರ, ರಾಘವೇಂದ್ರ, ಶಾಂತರಾಜ ಒಳಗೊಂಡ
ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.