ದಾವಣಗೆರೆ: ರೈತರ ಕೃಷಿ ಪಂಪ್ ಸೆಟ್ ಕಳ್ಳನ ಮಾಡತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2ಲಕ್ಷ ಬೆಲೆಯ 5 ಪಂಪ್ ಸೆಟ್ ಗಳು ಹಾಗೂ ಕೃತ್ಯಕ್ಕೆ ಬಳಸಿದ 1,50,000/- ರೂ. ಬೆಲೆಯ ಪ್ಯಾಸೆಂಜರ್ ಆಟೋ ಸೇರಿ ಒಟ್ಟು 3,50,000 ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮದ ಪುನೀತ್ ಕುಮಾರ್ (34 ) ಇವರ ಅಡಿಕೆ ತೋಟದ ಮಿಷಿನ್ ಮನೆಯಲ್ಲಿ ಇರಿಸಿದ್ದ 04 ಸಬ್ ಮರ್ಸಿಬಲ್ ಪಂಪ್ ಸೆಟ್ ದಿನಾಂಕ:17-07-2024 ರಂದು ರಾತ್ರಿ ಕಳ್ಳತನವಾಗಿದ್ದವು. ಮಿಷಿನ್ ಮನೆಯ ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಚನ್ನಗಿರಿ ಪೊಲೀಸ್ ಠಾಣೆ ಪ್ರಕರಣ ದಾಖಲುಸಿದ್ದರು.
ಈ ಪ್ರಕರಣದ ಮಾಲು ಮತ್ತು ಆರೋಪಿಗಳ ಪತ್ತೆ ಮಾಡಲು ಎಎಸ್ಪಿಗಳಾದ ವಿಜಯ್ ಕುಮಾರ್ ಎಂ ಸಂತೋಷ್, & ಜಿ ಮಂಜುನಾಥ್ ಹಾಗೂ ಎ.ಎಸ್.ಪಿ. ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಪಿಎಸ್‌ಐ ಸುರೇಶ್ ಹಾಗೂ ಪಿಎಸ್‌ಐ ಗುರುಶಾಂತಯ್ಯ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡವು ಆರೋಪಿಗಳಾದ 01) ಮುಬಾರಕ್ (31) ಮ್ಯಾಕಾನಿಕ್ ಕೆಲಸ ವಾಸ: ದಾವಣಗೆರೆ ನಗರ. 02) ನೌಷದ್ (31) ಗಾರೆ ಕೆಲಸ ವಾಸ: ಹೊಸೂರು ಗ್ರಾಮ, ಸ್ವಂತ ಊರು- ಬಸವಪಟ್ಟಣ, ಚನ್ನಗಿರಿ ತಾಲ್ಲೂಕು. 03) ಶಾರೂಕ್ ಖಾನ್ (28) ಗಾರೆ ಕೆಲಸ, ಹಾಲಿ ವಾಸ: ಲಷ್ಕರ್ ಮೊಹಲ್ಲಾ, ಚನ್ನಗಿರಿ ಟೌನ್, ಸ್ವಂತ ಊರು ಹನುಮಂತಪುರ ಗ್ರಾಮ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಇವರನ್ನು ಪತ್ತೆ ಮಾಡಲಾಗಿದೆ.
ಆರೋಪಿಗಳಿಂದ ಚನ್ನಗಿರಿ ಠಾಣಾ ವ್ಯಾಪ್ತಿಯ ಹಿರೇಮಳಲಿ, ನಲ್ಲೂರು, ಲಕ್ಷ್ಮೀ ಸಾಗರ ಮತ್ತು ಲಿಂಗದಹಳ್ಳಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡದಹಳ್ಳಿ ಗ್ರಾಮಗಳಲ್ಲಿ ಒಟ್ಟು 05 ಕಡೆ ಕಳುವು ಮಾಡಿದ್ದ 2,00,000/- ರೂಪಾಯಿ ಬೆಲೆ ಬಾಳುವ 05 ಸಬ್ ಮರ್ಸಿಬಲ್ ಪಂಪ್ ಸೆಟ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 1,50,000/- ರೂಪಾಯಿ ಬೆಲೆ ಬಾಳುವ ಪ್ಯಾಸೆಂಜರ್ ಆಟೋ ಸೇರಿ ಒಟ್ಟು 3,50,000 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ತಂಡಕ್ಕೆ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.