ದಾವಣಗೆರೆ: ರಾಜ್ಯ ಮತ್ತು ಹೊರ ರಾಜ್ಯದ ರೈತರು, ದಲ್ಲಾಳಿಗಳಿಂದ ಮೆಕ್ಕೆಜೋಳ, ಭತ್ತ ಖರೀದಿ ಮಾಡಿ, ಹಣ ನೀಡದೆ ವಂಚನೆ ಮಾಡುತ್ತಿದ್ದ ಆರೋಪಿ ಶ್ರೀನಿವಾಸ ಅನ್ನು ಪೊಲೀಸರು ಬಂಧನ ಮಾಡಿದ್ದಾರೆ. 25 ಲೋಡ್ ಭತ್ತದ 1.83 ಕೋಟಿ ಬಾಕಿ ಹಣ ಕೊಡದೆ ವಂಚನೆ ಪ್ರಕರಣದಲ್ಲಿ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ದಾವಣಗೆರೆಯ ಶ್ರೀನಿವಾಸ @ ಶಿವಣ್ಣ 25 ಲೋಡ್ ಭತ್ತದ ಖರೀದಿ ಹಣ 1,83,65,200/- ರೂ ಹಣವ ಕೊಡದೆ ಸಬೂಬು ಹೇಳುತ್ತಿದ್ದಾರೆಂದು ದಿನಾಂಕ:07.10.2023 ರಂದು ಎಂ. ನರಸಯ್ಯ(48) ಭತ್ತದ ಬ್ರೋಕರ್ ಕೆಲಸ, ವಾಸ : ಕಂಪಮಲ್ಲಾ ಗ್ರಾಮ, ನಂದಿಹಾಲ ಜಿಲ್ಲೆ,ಕೊವಿಲ ಕೊಂಟಾಲ, ಆಂಧ್ರಪ್ರದೇಶ ರಾಜ್ಯ ಇವರು ಆರ್.ಎಂ.ಸಿ. ಪೊಲೀಸ್ ಠಾಣೆಯ ದೂರು ನೀಡಿದ್ದರು.
ತಮ್ಮ ಊರಿನ ಸುತ್ತಮುತ್ತ ಇರುವ ರೈತರಿಂದ ಭತ್ತವನ್ನು ಕೊಡಿಸುವ ಬ್ರೋಕರ್ ಕೆಲಸವನ್ನು ಮಾಡುತ್ತಿದ್ದು, ಈ ಹಿಂದೆ ದಾವಣಗೆರೆಯ ಶ್ರೀನಿವಾಸ @ ಶಿವಣ್ಣ ಎಂಬುವವರ ದೂರವಾಣಿ ಕರೆಮಾಡಿ ನಾನು ನಿಮ್ಮ ಲಾರಿಯ ಡ್ರೈವರ್ ಕಡೆಯಿಂದ ನಿಮ್ಮ ನಂಬರ್ ಪಡೆದುಕೊಂಡಿದ್ದೇನೆ ನನ್ನದು ಭತ್ತದ ಮಿಲ್ ಇರುತ್ತದೆ. ನೀವು ನನಗೆ ಭತ್ತವನ್ನು ಕಳುಹಿಸಿರಿ ನಾನು ಅವರಿಗಿಂತ 50 ರೂ ಹೆಚ್ಚಿಗೆ ಕೊಡುತ್ತೇನೆ ಭತ್ತ ಮಾರಾಟಕ್ಕೆ ನನ್ನ ಜಿ ಎಸ್ ಟಿ ಇದೆ ಎಂದು ಪರಿಚಯಮಾಡಿಕೊಂಡಿದ್ದನು. ಆರೋಪಿ ದಿ: 28-04-2023 ರಿಂದ 21-05-2023 ರ ಅವಧಿಯಲ್ಲಿ 40 ಲೋಡ್ ಭತ್ತವನ್ನು ಕಳುಹಿಸಿದ್ದು, ಅದರ ಒಟ್ಟು ಮೊತ್ತ 2,58,65,200/- ಆಗಿರುತ್ತದೆ. ಅದರಲ್ಲಿ ಮೊದಮೊದಲು ಕಳುಹಿಸಿರುವ 15 ಲೋಡ್ ಭತ್ತದ ಹಣಕ್ಕೆ, ಅದರ ಮೊತ್ತ ರೂ. 75,00,000 /- ಹಣವನ್ನು ಆರೋಪಿ ಶ್ರೀನಿವಾಸ @ ಶಿವಣ್ಣ ರವರು ಕಳುಹಿಸಿ ನಂಬಿಕೆ ಹುಟ್ಟಿಸಿದ್ದನು.
ಅದೇ ನಂಬಿಕೆಯಿಂದ ದೂರುದಾರ ಉಳಿದ 25 ಲೋಡ್ ಭತ್ತವನ್ನು ನೆರೆಹೊರೆಯ ರೈತರಿಂದ ಪಡೆದು ಶ್ರೀನಿವಾಸಗೆ ಕಳುಹಿಸಿಕೊಟ್ಟಿದ್ದರು. ನಂತರ 25 ಲೋಡ್ ಬತ್ತದ ಬಾಕಿ ಉಳಿದಿರುವ ರೂ. 1,83,65,200/- ರೂ ಹಣವನ್ನು ಕೊಡದೆ ಸಬೂಬು ಹೇಳುತ್ತಾ ಬಂದಿದ್ದು, ನಂತರ ಶ್ರೀನಿವಾಸ @ ಶಿವಣ್ಣ ನು ಫೋನ್ ರಿಸೀವ್ ಮಾಡದೇ ಇದ್ದುದರಿಂದ ದಾವಣಗೆರೆಗೆ ಹುಡುಕಿಕೊಂಡು ಬಂದಿದ್ದು. ಅವರ ವಿಳಾಸ ಇತರೆ ಮಾಹಿತಿ ದೊರೆತಿರುವುದಿಲ್ಲ. ಶ್ರೀನಿವಾಸ @ ಶಿವಣ್ಣ ನು 25 ಲೋಡ್ ಭತ್ತ ತರಿಸಿಕೊಂಡು ರೂ. 1,83,65,200/- ರೂ ಹಣ ನೀಡದೇ ಮೋಸ ಮಾಢಿದ್ದು, ಕಾನೂನು ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ಆರ್.ಎಂ.ಸಿ. ಪೊಲೀಸ್ ಠಾಣೆಯ ಪಿ.ಎಸ್.ಐ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಈ ಪ್ರಕರಣದ ಆರೋಪಿ ಪತ್ತೆಗಾಗಿ ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ, ಮಂಜುನಾಥ ಜಿ ಹಾಗೂ ಡಿವೈಎಸ್ಪಿ ಪದ್ಮಶ್ರೀಗುಂಜೀಕರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರೂಪಾ ತೆಂಬದ್, ಸಿಬ್ಬಂದಿ ಸೋಮಶೇಖರಪ್ಪ, ಲೋಹಿತ್, ಮಲ್ಲಿಕಾರ್ಜುನ ಹಾದಿಮನಿ, ಗೋವಿಂದರಾಜ್, ಸಣ್ಣ ಬುಡೇನ್ ವಲಿ ಒಳಗೊಂಡ ತಂಡವು ದಿನಾಂಕ:13.11.2024 ರಂದು ಸದರಿ ಶ್ರೀನಿವಾಸ ವಿ ತಂದೆ ವೆಂಕಪ್ಪ 46 ವರ್ಷ, ವ್ಯಾಪಾರಸ್ಥರು, 10ನೇ ಕ್ರಾಸ್, ಮಹಾಲಕ್ಷ್ಮಿ ಲೇಔಟ್ ದಾವಣಗೆರೆ. ಈತನನ್ನು ಬಂಧನ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಲ್ಲಿ ಇಡಲಾಗಿದೆ.
ವಿವಿಧ ಠಾಣೆಯಲ್ಲಿ ವಂಚನೆ ಪ್ರಕರಣಗಳು
- ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ-187/2020 ಕಲಂ 406,420 ಐಪಿಸಿ
- ಹದಡಿ ಪೊಲೀಸ್ ಠಾಣೆ ಪಿಎಸ್-174/2021 ಕಲಂ 406,420 ಐಪಿಸಿ
- ಆರ್.ಎಂ.ಸಿ. ಪೊಲೀಸ್ ಠಾಣೆಯ 77/2023 ಹಾಗೂ ಕಲಂ 406,420 ಐಪಿಸಿ
- ಬಸವನಗರ ಪೊಲೀಸ್ ಠಾಣೆ 17/2022, 59/2022 ಕಲಂ 406,420 ಐಪಿಸಿ
- ಆಂಧ್ರಪ್ರದೇಶ ರಾಜ್ಯದ ತಿರುಪತಿ ಜಿಲ್ಲೆಯ ಸತ್ಯವೇಡು ಪೊಲೀಸ್ ಠಾಣೆ ಗುನ್ನೆನಂ 56/2023 ಕಲಂ 406,420 ಐಪಿಸಿ ರಿತ್ಯ ಪ್ರಕರಣ
ರಾಜ್ಯದಲ್ಲಿನ ರೈತರಲ್ಲಿ ಮೆಕ್ಕೆಜೋಳ, ಭತ್ತವನ್ನು ಪಡೆದು ಹಣವನ್ನು ವಾಪಸ್ ಕೊಡದೆ ಹಲವು ದೂರುಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇದ್ದು ಈ ಬಗ್ಗೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳಬೇಕಾಗಿರುತ್ತದೆ.
ಪ್ರಕರಣಗಳಲ್ಲಿ ಹಲವಾರು ರೈತರಿಗೆ ಹಾಗೂ ದಲ್ಲಾಳಿಗೆ ವರ್ತಕರಿಗೆ ವಂಚನೆ ಮಾಡಿದ್ದ ಆರೋಪಿತ ಶ್ರೀನಿವಾಸ ವಿ ನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಸಿಇಎನ್ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿದ್ದಾರೆ.