ದಾವಣಗೆರೆ: ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮತ್ತು ಲಾಭ ಗಳಿಸುವ ಬಗ್ಗೆ ಟಿಪ್ಸ್ ಕೊಡುವುದಾಗಿ ನಂಬಿಸಿ, ಓರ್ವನಿ ವ್ಯಕ್ತಿಗೆ 30ಸಾವಿರ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
UNITED TECHNOLOGY ಕಂಪನಿ ಹೆಸರಿನಲ್ಲಿ ಸ್ಟಾಕ್ ಮಾರ್ಕೆಟ್ ಟ್ರೆಂಡಿಂಗ್ ಬ್ಯಸಿನೆಸ್ ಬಗ್ಗೆ ಕೆಲವು ಟಿಪ್ಸ್ ಗಳನ್ನು ಕೊಡುತ್ತೇವೆ ಅಂತ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ಆರೋಪಿಗಳ ಬಂಧನವಾಗಿದೆ.
ದಾವಣಗೆರೆಯ ಹೊಂಡದ ಸರ್ಕಲ್ ನಿವಾಸಿ ರಾಜೇಶ್ ಎ ಪಾಲಂಕರ್ ವಂಚನೆಗೆ ಒಳಗಾದವರು. UNITED TECHNOLOGY ಕಂಪನಿಯಿಂದ ಕರೆಮಾಡುತ್ತಿದ್ದೇವೆಂದು ಪರಿಚಯಿಸಿಕೊಂಡು ವ್ಯಕ್ತಿ, ಸ್ಟಾಕ್ ಮಾರ್ಕೆಟ್ ಟ್ರೆಂಡಿಂಗ್ ಬ್ಯಸಿನೆಸ್ sಮಾಡುವ ಆಸಕ್ತಿ ಇದ್ದರೆ, ನಮ್ಮ ಕಂಪನಿ ಕಡೆಯಿಂದ ಕೆಲವು ಟಿಪ್ಸ್ ಗಳನ್ನು ಕೊಡುತ್ತೇವೆ. ಈ ಟಿಪ್ಸ್ ಉಪಯೋಗಿಸಿಕೊಂಡು ಹೆಚ್ಚು ಲಾಭಾಂಶ ಗಳಿಸಬಹುದು ಎಂದು ನಂಬಿಸಿ ರೂ. 30,000/-ಗಳನ್ನು ರ್ಗಾವಣೆ ಮಾಡಿಸಿಕೊಂಡು ವಂಚನೆ ನಡೆದಿದೆ ಎಂದು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ ಹಾಗೂ ಮಂಜುನಾಥ ಜಿ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಸಾದ್ ಪಿ ಹಾಗೂ ಸಿಬ್ಬಂದಿ ಆರೋಪಿ ಬ್ಯಾಂಕ್ ಖಾತೆಗಳಿಗೆ ಸಂಬಂದಿಸಿದಂತೆ ಮತ್ತು ಮೊಬೈಲ್ ನಂಬರ್ ಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಮೇಲ್ಕಂಡ ಪ್ರಕರಣದ ಆರೋಪಿಗಳಾದ 01) ಸಂದೀಪ್ ಕುಮಾರ್ ಆರ್ ತಂದೆ ರಾಜು. 30 ವರ್ಷ , Benglore Life spaces private limited Constructions ನಲ್ಲಿ ಅಕೌಟೆಂಟ್ ಆಗಿ ಕೆಲಸ, ವಾಸ ರಾಜೀವ್ ನಗರ, ಚೂಡಸಂದ್ರ, ಬೆಂಗಳೂರು. ಮತ್ತು 02) ಮುರುಳಿ. ಎಲ್ ತಂದೆ ಲಕ್ಷ್ಮಣ 25 ವರ್ಷ, Benglore Life spaces private limited Constructions s ನಲ್ಲಿ Distributor ಆಗಿ ಕೆಲಸ, ವಾಸ ಮೀನಾಕ್ಷಿ ಲೇಔಟ್, ಚೂಡಸಂದ್ರ, ಬೆಂಗಳೂರು. ಇವರುಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ದಾವಣಗೆರೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ಪಿ.ಐ ಪ್ರಸಾದ್ ಪಿ. ಮತ್ತು ಸಿಬ್ಬಂದಿ ಪ್ರಕಾಶ್. ಹೆಚ್. ಮುತ್ತುರಾಜ್, ಗೋವಿಂದ್ ರಾಜ್ ಇವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.