Connect with us

Dvgsuddi Kannada | online news portal | Kannada news online

ದಾವಣಗೆರೆ: ಕಳುವಾದ 2.26 ಲಕ್ಷ ಮೌಲ್ಯದ 14 ಮೊಬೈಲ್ ಪತ್ತೆ; ವಾರಸುದಾರರಿಗೆ ವಾಪಸ್‌..!!

ದಾವಣಗೆರೆ

ದಾವಣಗೆರೆ: ಕಳುವಾದ 2.26 ಲಕ್ಷ ಮೌಲ್ಯದ 14 ಮೊಬೈಲ್ ಪತ್ತೆ; ವಾರಸುದಾರರಿಗೆ ವಾಪಸ್‌..!!

ದಾವಣಗೆರೆ: CEIR ಪೋರ್ಟಲ್ ಮೂಲಕ ಕಳುವಾದ 2.26 ಲಕ್ಷ ಮೌಲ್ಯದ 14 ಮೊಬೈಲ್ ಪತ್ತೆ ಹಚ್ಚಿದ ಪೊಲೀಸರು ವಾರಸುದಾರರಿಗೆ ವಾಪಸ್‌ ನೀಡಿದ್ದಾರೆ.‌

ಜಿಲ್ಲೆಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನ CEIR ಪೋರ್ಟಲ್ ( ಕಳುವಾದ, ಸುಲಿಗೆಯಾದ, ಕಾಣೆಯಾದ ಮೊಬೈಲ್ ಗಳ ಬ್ಲಾಕ್ ಮಾಡಲು ಕೇಂದ್ರ ಟೆಲಿ ಕಮ್ಯುನಿಕೇಶನ್ ಇಲಾಖೆಯಿಂದ ಜಾರಿಗೆ ತಂದಿರುವ ನೂತನ ವ್ಯವಸ್ಥೆ )ಗೆ ಭೇಟಿ ನೀಡಿ ಮೊಬೈಲ್ ನ ಸಂಪೂರ್ಣ ಮಾಹಿತಿ ನೀಡಿ ಮೊಬೈಲ್ ಬ್ಲಾಕ್ ಮಾಡಿದ್ದರು. ನಂತರ ಮೊಬೈಲ್ ಗಳನ್ನು ದಾವಣಗೆರೆ ಪೊಲೀಸರು ನೂತನ CEIR ವೆಬ್ ಪೋರ್ಟಲ್ ಮೂಲಕ ಪತ್ತೆ ಮಾಡಿದ್ದಾರೆ. ಚನ್ನಗಿರಿ ವ್ಯಾಪ್ತಿಯಲ್ಲಿ ನೂತನ CEIR ವೆಬ್ ಪೋರ್ಟಲ್ ಮೂಲಕ ಒಟ್ಟು 2,26,000/- ರುಗಳು ಮೌಲ್ಯದ 14 ವಿವಿಧ ಕಂಪನಿಯ ಮೊಬೈಲ್ ಗಳು ಪತ್ತೆಯಾಗಿರುತ್ತವೆ.

ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ವಾರಸುದಾರರಿಗೆ ಪತ್ತೆಯಾದ ಮೊಬೈಲ್ ಗಳನ್ನು ಮರಳಿಸಿರುತ್ತಾರೆ. ಈ ಸಂಧರ್ಭದಲ್ಲಿ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮನ್ನೊಳಿ, ಚನ್ನಗಿರಿ ಪೊಲೀಸ್ ಠಾಣೆಯ ಪಿಐ ನಿರಂಜನ್ ಉಪಸ್ಥಿತರಿದ್ದರು. ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾದಲ್ಲಿ/ ಸುಲಿಗೆಯಾಗಿದ್ದಲ್ಲಿ/ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ CEIR ವೆಬ್ ಪೋರ್ಟಲ್ ಗೆ ಬೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆಯಲು ಈ ಮೂಲಕ ತಿಳಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top