Connect with us

Dvgsuddi Kannada | online news portal | Kannada news online

ದಾವಣಗೆರೆ: ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ 1.45 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿ; ಆರೋಪಿ ಬಂಧನ

ದಾವಣಗೆರೆ

ದಾವಣಗೆರೆ: ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ 1.45 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿ; ಆರೋಪಿ ಬಂಧನ

ದಾವಣಗೆರೆ: ಬೈಕ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ 1.45 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಚಿನ್ನ, ನಗದು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ನಡೆದಿದೆ.

ಮೇ 28ರಂದು ಸಂಜೆ 4.00 ಗಂಟೆ ಸಮಯದಲ್ಲಿ ಹರಿಹರ ಹಳ್ಳಹಾಪುರ ವಾಸಿ ಕಮಲಮ್ಮ ಅವರನ್ನು 20-25 ವರ್ಷದ ಯುವಕ ಉಕ್ಕಡಗಾತ್ರಿಯಿಂದ ನಿಟುಪ್ಪಳ್ಳಿ
ಬಿಡುವುದಾಗಿ ಹೇಳಿ ಬೈಕಿನಲ್ಲಿ ಕೂರಿಸಿಕೊಂಡಿದ್ದಾನೆ. ಉಕ್ಕಡಗಾತ್ರಿ ನಿಟುಪ್ಪಳ್ಳಿ ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆಂದು ಬೈಕ್ ನಿಲ್ಲಿಸಿ, ಖಾರದ ಪುಡಿಯನ್ನು ಕಮಲಮ್ಮರವರು ಮುಖಕ್ಕೆ ತಿಕ್ಕಿ, ಭುಜಕ್ಕೆ ಗುದ್ದಿ ಕೊರಳಲ್ಲಿದ್ದ ಸುಮಾರು 34 ಗ್ರಾಂ ತೂಕದ 1,45,000/- ರೂ ಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದರು.

ಈ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ದಾವಣಗೆರೆ ಜಿಲ್ಲೆ ಹಾಗೂ ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್ ಮಾರ್ಗದರ್ಶನದಲ್ಲಿ ಹರಿಹರ ವೃತ್ತ
ನಿರೀಕ್ಷಕ ಎಂ.ಐ ಗೌಡಪ್ಪಗೌಡರ ನೇತೃತ್ವದಲ್ಲಿ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ, ಮಧುಚಂದ್ರ @, ಮಧು, ದುಮ್ಮಿ ಮಧು, ಕೋಡಿಯಾಲ್ ಹೊಸಪೇಟೆ, ರಾಣೆಬೆನ್ನೂರು ತಾ|ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ.ಆರೋಪಿ ಕಮಲಮ್ಮರವರ ಕೊರಳಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದು ತಿಳಿದು ಬಂದಿರುತ್ತದೆ.

ಆರೋಪಿತನಿಂದ ಕೃತ್ಯಕ್ಕೆ ಉಪಯೋಗಿಸಿದ್ದ 70,000/-ರೂ. ಬೈಕ್. ಬಂಗಾರದ ಸರವನ್ನು ಸುಲಿಗೆ ಮಾಡಿ ಮಾರಾಟ ಮಾಡಿ ಉಳಿಸಿಕೊಂಡಿದ್ದ 70,200/ರೂ ನಗದು ಹಣ, ಸುಲಿಗೆ ಮಾಡಿಕೊಂಡು ಹೋಗಿದ್ದ, 31.65 ಗ್ರಾಂ ಸುಮಾರು 1,50,000/-ರೂ ಬೆಲೆ ಬಾಳುವ ಬಂಗಾರದ ಘಟ್ಟಿಯನ್ನು ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸುಲಿಗೆ ಪ್ರಕರಣ ತಂಡವು ಭೇಧಿಸಿದ ತಂಡಕ್ಕೆ ಪೊಲೀಸ್ ಅಧೀಕ್ಷ ಡಾ. ಅರುಣ್ ಕೆ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top