Connect with us

Dvgsuddi Kannada | online news portal | Kannada news online

ದಾವಣಗೆರೆ: ಬಾಡ ಕ್ರಾಸ್ ಬಳಿ ಮೊಬೈಲ್ , ಹಣ ಸುಲಿಗೆ; 3 ಆರೋಪಿಗಳ ಬಂಧನ

ದಾವಣಗೆರೆ

ದಾವಣಗೆರೆ: ಬಾಡ ಕ್ರಾಸ್ ಬಳಿ ಮೊಬೈಲ್ , ಹಣ ಸುಲಿಗೆ; 3 ಆರೋಪಿಗಳ ಬಂಧನ

ದಾವಣಗೆರೆ; ನಗರದ ಹೊರ ವಲಯದ ಬಾಡ ಕ್ರಾಸ್ ಬಳಿ ಮೊಬೈಲ್ , ಹಣ ಸುಲಿಗೆ ಮಾಡುತಗತಿದ್ದ 3 ಆರೋಪಿಗಳನ್ನು ಬಂಧಿಸಲಾಗುದೆ.ಆರೋಪಿಗಳಿಂದ ಸುಲಿಗೆ ಮಾಡಿದ 10 ಸಾವಿರ ಬೆಲೆ ಬಾಳುವ ಒಂದು ಮೊಬೈಲ್, 200 ರೂ. ನಗದು ಹಣ ಹಾಗೂ ಇನ್ನೊಂದು ಸ್ಥಳದಲ್ಲಿ ಕಿತ್ತುಕೊಂಡು ಹೋಗಿದ್ದ 10 ಸಾವಿರದ ವಿವೋ ಕಂಪನಿಯ ಮೊಬೈಲ್‌ನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ 10 ಸಾವಿರದ ಮೊಬೈಲ್‌ನ್ನು ಹಾಗೂ ಡಿಯೋ ಸ್ಕೂಟರ್‌ನ್ನು,ಪ್ಯಾಸೆಂಜರ್ ಆಟೋ ಸೇರಿ ಒಟ್ಟು 1, 70, 200 ರೂ. ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ತ್ಯಾವಣಗಿಯ ಸಂಜು ಬಿ ಎಂಬುವವರು ದಾವಣಗೆರೆಯ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮೇ 31 ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ದಾವಣಗೆರೆ ನಗರದ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣಾ ಸರಹದ್ದಿನ ಬೆಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-48ರ ಪಕ್ಕದಲ್ಲಿರುವ ಆವರಗೆರೆ ಕಡೆಯಿಂದ ಬಾಡಾ ಕ್ರಾಸ್ ಅಂಡರ್ ಬ್ರಿಡ್ಜ್ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದಾಗ ತನ್ನ ಹಣ ಹಾಗೂ ಮೊಬೈಲ್‌ನ್ನು ಸುಲಿಗೆ ಮಾಡಿದ್ದಾರೆ.ಡಿಯೋ ಸ್ಕೂಟರ್ ನಲ್ಲಿ ಬಂದು ನನ್ನ ಬಳಿ ಇದ್ದ 10 ಸಾವುರ ರೂ. ಬೆಲೆ ಬಾಳುವ ಮೊಬೈಲ್‌ನ್ನು ಹಾಗೂ 500 ರೂ. ನಗದು ಹಣವನ್ನು ಸುಲಿಗೆ ಮಾಡಿ ಹೋಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿಗಳ ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅರ್.ಬಿ ಬಸರಗಿ ಹಾಗೂ ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್.ಡಿ ಮಾರ್ಗದರ್ಶನದಲ್ಲಿ ಆಜಾದ್ ನಗರ ವೃತ್ತದ ಪ್ರಭಾರದಲ್ಲಿದ್ದ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಆರ್.ಆರ್ ಪಾಟೀಲ್ ಆರ್.ಎಂ.ಸಿ ಠಾಣೆಯ ಪಿ.ಎಸ್.ಐ ಅಕ್ಬರ್ ಮುಲ್ಲಾ, ರುಕ್ಕಮ್ಮ ಮತ್ತು ಸಿಬ್ಬಂದಿಯವರೊಳಗೊಂಡ ತಂಡವು ಆರೋಪಿಗಳಾದ ಹೆಚ್.ಸಿ ಸಂದೀಪ್ (24) ಐಗೂರು ಗ್ರಾಮ ಪ್ರವೀಣ್ ಕುಮಾರ್ (34) ದೇವರಾಜ ಅರಸ್ ಬಡಾವಣೆ, ‘ಬಿ’ ಬ್ಲಾಕ್, ದಾವಣಗೆರೆ, ಅವಿನಾಶ 30 ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ‘ಬಿ’ ಬ್ಲ್ಲಾಕ್, ಇವರನ್ನು ಬಂಧಿಸಿ ನ್ಯಾಯಂಗ ಬಂಧನದಲ್ಲಿ ಇರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಅಧಿಕಾರಿಗಳನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top