ದಾವಣಗೆರೆ: ಹಳೇ ದ್ವೇಷಕ್ಕೆ ಕಷ್ಟಪಟ್ಟು ಬೆಳೆಸಿದ್ದ ಎರಡು ಎಕರೆಯ ಅಡಿಕೆ ಮರಗಳನ್ನು ಕಡಿದು ಹಾಕಿದ ಘಟನೆ ದಾವಣಗೆರೆ ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ನಡೆದಿದೆ. ನಾಗರಕಟ್ಟೆ ಗ್ರಾಮದ ಹಾಲೇಶಪ್ಪ ಎಂಬ ರೈತ ಕಷ್ಟಪಟ್ಟು ಬೆಳೆಸಿದ ಎರಡು ವರ್ಷದ ಎರಡು ಎಕರೆ ಅಡಿಕೆ ಮರಗಳನ್ನು ಕಡಿದು ಹಾಕಲಾಗಿದೆ. ಹಳೇ ದ್ವೇಷದ ಹಿನ್ನೆಲೆ ರಾತ್ರೋ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯಕ್ಕೆ ಅಡಿಕೆ ಮರಗಳು ಸಂಪೂರ್ಣ ನಾಶವಾಗಿವೆ. ಈ ಬಗ್ಗೆ ಹಾಲೇಶಪ್ಪ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ದುಷ್ಕರ್ಮಿಗಳನ್ನು ಹಿಡಿದು ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ರೈತ ಹಾಲೇಶಪ್ಪ ಆಗ್ರಹಿಸಿದ್ದಾರೆ.



