ದಾವಣಗೆರೆ; ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 15 ಸಾವಿರ ಬೆಲೆಯ ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ 20ಸಾವಿರ ಬೆಲೆಯ ಬೈಕ್ ವಶಕ್ಕೆ ಪಡೆದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ನಟರಾಜ್ ಹೆಚ್.ಜಿ. ಎಂಬುವರು ಚಿತ್ರದುರ್ಗದಿಂದ ಹರಿಹರಕ್ಕೆ ತನ್ನ ಬೈಕಿನಲ್ಲಿ ರಾತ್ರಿ10 ಗಂಟೆಗೆ ದಾವಣಗೆರೆ ತಾಲ್ಲೂಕು ಹೆಚ್. ಕಲ್ಪನಹಳ್ಳಿ ಬಳಿ ಅಪೂರ್ವ ಹೊಟೇಲ್ ಹತ್ತಿರ ಹೋಗುತ್ತಿರುವಾಗ, ಹಿಂದಿನಿಂದ ಒಂದು ಬೈಕಿನಲ್ಲಿ ಯಾರೋ ಮೂರು ಬೈಕನ್ನು ಅಡ್ಡ ಹಾಕಿ15 ಸಾವಿರ ರೂ. ಬೆಲೆಯ ಓಪೋ ಕಂಪನಿಯ ಮೊಬೈಲನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಸದರಿ ಪ್ರಕರಣದಲ್ಲಿ ಆರೋಪಿ ಮಾಲು ಪತ್ತೆ ಬಗ್ಗೆ ದಾವಣಗೆರೆ ಗ್ರಾಮಾಂತರ ಉಪ ವಿಬಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್ ರವರ ಮಾರ್ಗದರ್ಶನದಲ್ಲಿ ಪಿ ಐ ಲಿಂಗನಗೌಡ ನೆಗಳೂರು ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳೊಂದಿಗ ಆರೋಪಿಗಳಾಸ ತೂಹಿದ್ (27) ಅಮಾನುಲ್ಲಾ @ ಅಮಾನ್ (22)ವರ್ಷ, ಫರೋಜ್ ಅಹಮ್ಮದ್ (22) ಬಂಧನ ಮಾಡಿದ್ದು,ಆರೋಪಿತರಿಂದ ಸುಲಿಗೆ ಮಾಡಿದ್ದ ಓಪೋ ಕಂಪನಿಯ 15 ಸಾವಿರ ಬೆಲೆಯ ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ 20 ಸಾವಿರ ಬೆಲೆಯ ಬೈಕನ್ನು ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆರೋಪಿತರು ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.