ದಾವಣಗೆರೆ; ಜಿಲ್ಲೆಯ ಜನರೇ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ. ನಗರದ ಆಂಜನೇಯ ಬಡಾವಣೆ ನಿವಾಸಿಯೊಬ್ಬ ತನ್ನ 4 ವರ್ಷ 4 ತಿಂಗಳ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಆರೋಪದ ಹಿನ್ನೆಲೆ ವಿದ್ಯಾನಗರ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.
ಗೋಕಾಕ್ ಮೂಲದ ಹಾಲಿ ದಾವಣಗೆರೆ ನಗರದ ಆಂಜನೇಯ ಬಡಾವಣೆ ವಾಸಿಯಾದ, ಹರಿಹರದ ಕಾರ್ಗೀಲ್ ಫ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿರುವ ಆರೋಪಿತ ಅಮರ್ ತಂದೆ ಮನೋಹರ್ ಕಿತ್ತೂರ್ (36), ಈತನು ಪತ್ನಿ ಜಯಲಕ್ಷ್ಮಿ ತನ್ನ ತವರು ಊರಾದ ವಿಜಯಪುರದಲ್ಲಿದ್ದು, ಆರೋಪಿತನ ತಾಯಿ ಸಾವಿತ್ರಮ್ಮ ಮನೆಯಲ್ಲಿದ್ದಾರ. ಈ ಸಂಧರ್ಭದಲ್ಲಿ ತನ್ನ ಮಕ್ಕಳಾದ ಅದ್ವೈತ್ ಮತ್ತು ಅನ್ವೀತ್, 04 ವರ್ಷ 04 ತಿಂಗಳು, ಅವಳಿ ಮಕ್ಕಳನ್ನು ದಿನಾಂಕ: 31-05-2023 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಕೊಲೆ ಮಾಡುವ ಉದ್ದೇಶದಿಂದಲೇ ತನ್ನ ಕಾರಿನಲ್ಲಿ ಕರೆದುಕೊಂಡು ಚಳಗೇರಿ ಟೋಲ್ ಹತ್ತಿರ ಕರೆದುಕೊಂಡು ಹೋಗಿ ಸರ್ವೀಸ್ ರಸ್ತೆಯಲ್ಲಿ ಮಕ್ಕಳಿಬ್ಬರಿಗೂ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿಧದಾನೆ.
ಈ ಕೊಲೆ ಸಂಬಂಧ ಆರೋಪಿತನನ್ನು ಪೊಲೀಸರು ಬಂಧನ ಮಾಡಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ