Connect with us

Dvgsuddi Kannada | online news portal | Kannada news online

ದಾವಣಗೆರೆ: ಸೂಕ್ತ ದಾಖಲೆ ಇಲ್ಲದ 56 ಲಕ್ಷ ಮೌಲ್ಯದ ಮದ್ಯ ವಶ

ದಾವಣಗೆರೆ

ದಾವಣಗೆರೆ: ಸೂಕ್ತ ದಾಖಲೆ ಇಲ್ಲದ 56 ಲಕ್ಷ ಮೌಲ್ಯದ ಮದ್ಯ ವಶ

ದಾವಣಗೆರೆ: ಸೂಕ್ತ ದಾಖಲೆ ಇಲ್ಲದ 56 ಲಕ್ಷ ಮೌಲ್ಯದ ಮದ್ಯ ಹಾಗೂ 21 ಲಕ್ಷ ಮೌಲ್ಯದ ಲಾರಿಯನ್ನು ಡಿಪೋದಲ್ಲಿ ದಾವಣಗೆರ ಉಪವಿಭಾಗದ ಅಬಕಾರಿ ಅಧಿಕಾರಿಗಳ ತಂಡ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತದಿಂದ ದಾವಣಗೆರೆ ಡಿಪೋ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಉಪ ಅಬಕಾರಿ ಆಯುಕ್ತರ ನಿರ್ದೇಶನದಲ್ಲಿ ಅಬಕಾರಿ ಉಪಾಧೀಕ್ಷಕರ ನೇತೃತ್ವದಲ್ಲಿ ನಗರದ ಹೊರ ವಲಯದ ಪಾನೀಯ ನಿಗಮದ ಡಿಪೋಗೆ ಭೇಟಿ ನೀಡಿ, ಪರಿಶೀಲಿಸಿದಾಗ ಅಬಕಾರಿ ಭದ್ರತಾ ಚೀಟಿ ನಮೂದಾಗದ ಮದ್ಯ ಪೂರೈಕೆಯಾ ಗಿರುವುದು ಬಯಲಾಗಿದೆ.

ಮೆ.ಯುನೈಟೆಡ್‌ಸ್ಪಿರಿಟ್ಸ್‌ಲಿಮಿಟೆಡ್, ಕುಂಬಳಗೋಡು ಗ್ರಾಮ, ಬೆಂಗಳೂರು ಡಿಸ್ಟಿಲರಿಯಿಂದ ಕಳಿಸಲಾಗಿದ್ದ ಅಶೋಕ ಲೈಲ್ಯಾಂಡ್ ಲಾರಿ (ಕೆಎ 16, ಎಎ 3225)ಯಲ್ಲಿ ತಂದಿದ್ದ ಮದ್ಯಕ್ಕೆ ಅಬಕಾರಿ ಭದ್ರತಾ ಚೀಟಿ ನಮೂದಾಗಿರಲಿಲ್ಲ.ಕೂಲ೦ಕುಷವಾಗಿ ಪರಿಶೀಲಿಸಿದ ಅಧಿಕಾರಿಗಳು 750 ಎಂಎಲ್ ಅಳತೆಯ12 ಬಾಟಲ್‌ಗಳ ಒಟ್ಟು 100 ಮದ್ಯದ ಪೆಟ್ಟಿಗಳ ಪೈಕಿ 7 ಮದ್ಯದ ಪೆಟ್ಟಿಗೆಗಳ ಮೇಲೆ ಅಬಕಾರಿ ಚೀಟಿ ನಮೂದಾಗಿರಲಿಲ್ಲ. ಈ ಪೆಟ್ಟಿಗೆಗಳು ಸ್ಕ್ಯಾನ್ ಆಗದ ಕಾರಣ ಅಬಕಾರಿ ಚೀಟಿ ನಮೂದಲ್ಲಿವ್ಯತ್ಯಾಸ ಕ೦ಡುಬಂದಿದ್ದು, ತಾಳೆಯಾಗದ್ದರಿ೦ದ ಅವುಗಳನ್ನ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ 1967ನಿಯಮ 3, 15ರ ಹಾಗೂ ಕರ್ನಾಟಕಅಬಕಾರಿ ಕಾಯ್ದೆ 1965ರ 11, 14ರಉಲ್ಲಂಘನೆಯಾಗಿದೆ. ಇದೇ ಕಾಯ್ದೆಯಕಲಂ 32, 36, 43(ಎ) ಪ್ರಕಾರ ದಂಡಾರ್ಹ ಹಾಗೂ ಶಿಕ್ಷಾರ್ಹ ಅಪರಾಧವೂ ಆಗಿದ್ದರಿ೦ದ ರಹದಾರಿ ಪತ್ರದಲ್ಲಿ ಉಲ್ಲೇಖಿಸಿರುವ ಒಟ್ಟು 4823.540 ಲೀಟರ್‌ನಷ್ಟು ಮದ್ಯವಿದ್ದ 550 ಮದ್ಯದ ಪೆಟ್ಟಿಗೆಗಳು ಹಾಗೂ ಮದ್ಯ ಸಾಗಿಸಿದ್ದ ಅಶೋಕ್ ಲೈಲ್ಯಾಂಡ್ ಲಾರಿಯನ್ನು ಜಪ್ತಿ ಮಾಡಿ, ಮುಂದಿನ ಕ್ರಮಕ್ಕಾಗಿ ಇಲಾಖೆವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರಕರಣದಾಖಲಿಸಿಕೊಳ್ಳಲಾಗಿದ್ದು, ಜಪ್ತಿ ಮಾಡಲಾದ ಮದ್ಯದ ಮೌಲ್ಯ 56,75,267 ರೂ.ಗಳಾಗಿದ್ದು, ಲಾರಿ ಮೌಲ್ಯ 21 ಲಕ್ಷ ರು.ಎಂದು ಅಬಕಾರಿ ಇಲಾಖೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top