ದಾವಣಗೆರೆ: ಪತ್ನಿಯ ಶೀಲ ಶಂಕಿಸಿ ಹಲ್ಲೆಗೆ ಯತ್ನಿಸಿದಾಗ ತಡೆಯಲು ಮುಂದಾದ ಮಗುವಿಗೆ ತಂದೆಯೇ ವಿಷ ಕುಡಿಸಿದ್ದಾನೆ. ವಿಷ ಕುಡಿದ ಬಾಲಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಗನಕಟ್ಟೆ ಗ್ರಾಮದಲ್ಲಿ ನಡೆದಿದೆ.
ಮುಬಾರಕ್ (12) ಸಾವನ್ನಪ್ಪಿದ ಮಗುವಾಗಿದೆ. ನಿನ್ನೆ(ಏ.9) ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.ಆಗ ಮಗು ತಾಯಿಯ ಮೇಲೆ ಹಲ್ಲೆಯನ್ನ ತಡೆಯಲು ಮುಂದಾಗಿದೆ. ಇದರಿಂದ ಸಿಟ್ಟಿಗೆದ್ದು ಪುತ್ರನಿಗೆ ಬಲವಂತದಿಂದ ವಿಷ ಕುಡಿಸಿದ್ದಾನೆ. ಕೂಡಲೇ ಆ ಬಾಲಕನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಲಾಗಿತ್ತು. ಇದೀಗ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಇಬ್ಬರನ್ನ ವಿವಾಹವಾಗಿದ್ದ ಸಲೀಂ, ಮೂರು ಗಂಡು, ಒಂದು ಹೆಣ್ಣು ಸೇರಿ ನಾಲ್ವರು ಮಕ್ಕಳು ಇದ್ದರು. ನಿರಂತರವಾಗಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ಇದೇ ಕಾರಣಕ್ಕೆ ಪತ್ನಿ ತನ್ನೂರು ಸುಲ್ತಾನಿಪುರ ಬಿಟ್ಟು ಸಂಬಂಧಿಕರ ಮನೆ ಗಂಗನಕಟ್ಟೆಗೆ ಬಂದಿದ್ದಳು. ಅಲ್ಲಿಗೂ ಬಂದು ಸಲೀಂ, ಪತ್ನಿ ಮೇಲೆ ಹಲ್ಲೆ ಮಾಡಿ ಮಗನ ಸಾವಿಗೆ ಕಾರಣವಾಗಿದ್ದಾನೆ. ಈ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಬಂಧಿಸಲಾಗಿದೆ.



