ದಾವಣಗೆರೆ: ನಗರದ ಉದ್ಯಮಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ನಂಬಿಸಿ ಅಪರಚಿತ ವ್ಯಕ್ತಿಯೊಬ್ಬ 4.50 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಆಂಜನೇಯ ಬಡಾವಣೆಯ ಉದ್ಯಮಿ ಬಸವರಾಜು ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದು, ಫೈಬೊ ಗ್ರೂಪ್ ಕಂಪನಿಯ ಹೆಸರು ಹೇಳಿಕೊಂಡ ವ್ಯಕ್ತಿ ವಂಚನೆ ಮಾಡಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣಳಿಸಬಹುದು ಎಂಬ ಮಾತು ನಂಬಿ ಬಸವರಾಜು ಅವರು1.50 ಲಕ್ಷದಂತೆ ಮೂರು ಸಲ ಹಣ ಬ್ಯಾಂಕ್ ಖಾತೆಗೆ ಹಣ ತುಂಬಿದ್ದಾರೆ. ಇನ್ನು ಹೆಚ್ಚಿನ ಹಣ ತೊಡಗಿಸುವಂತೆ ಆ ವ್ಯಕ್ತಿ ಕೋರಿದ್ದಾನೆ. ಆಗ ಬಸವರಾಜ್, ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡಲು ಆಗುವುದಿಲ್ಲ. ನಮ್ಮ ಹಣ ನಮಗೆ ವಾಪಸ್ ಕೊಡಿ ಎಂದಿದ್ದಾರೆ. ಆಗ ಅಪರಚಿತ ವ್ಯಕ್ತಿ ಹಣ ವಾಪಸ್ ಕೊಡಲು ಬರುವುದಿಲ್ಲ ಎಂದು ಪೋನ್ ಕಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ಧಾರೆ.