Connect with us

Dvgsuddi Kannada | online news portal | Kannada news online

ದಾವಣಗೆರೆ; ಅಕ್ರಮ ಮಾರಕಾಸ್ತ್ರ ಸಂಗ್ರಹ ; ಪ್ರಕರಣ ದಾಖಲಿಸಿ ಮಾರಕಾಸ್ತ್ರ, ಕಾರು ವಶ

ದಾವಣಗೆರೆ

ದಾವಣಗೆರೆ; ಅಕ್ರಮ ಮಾರಕಾಸ್ತ್ರ ಸಂಗ್ರಹ ; ಪ್ರಕರಣ ದಾಖಲಿಸಿ ಮಾರಕಾಸ್ತ್ರ, ಕಾರು ವಶ

ದಾವಣಗೆರೆ: ಲೆನಿನ್ ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮಾರಕಾಸ್ತ್ರ‌ ಮತ್ತು ಕಾರೊಂದನ್ನು ಕೆಟಿಜೆ ನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ಮಹಾನಗರ ಪಾಲಿಕೆ 36 ನೇ ವಾರ್ಡ್ ನ ಲೆನಿನ್ ನಗರ ಜನ‌ ಸಂಪರ್ಕ ಕಚೇರಿಯಲ್ಲಿ ಮಾರಕಾಸ್ತ್ರ ಸಂಗ್ರಹಿಡಲಾಗಿತ್ತು. ರೌಡಿಶೀಟರ್ ಕಣುಮ ಹಾಗೂ ಸಹಚರರು ನಂಬರ್ ಪ್ಲೇಟ್ ಇಲ್ಲದ ಕಾರನ್ನು ಇಟ್ಟು‌ಕೊಂಡಿದ್ದರು.‌ ಈ ಕಾರು ಪರಿಶೀಲನೆ‌ ವೇಳೆ ನಾಲ್ಕು ಮಚ್ಚು, 50 ಗ್ರಾಂ ಕಾರದ ಪುಡಿ ಪತ್ತೆಯಾಗಿವೆ. 10 ಲಕ್ಷ ಬೆಲೆಯ ಕಾರಿನ ಜತೆ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ಕಣುಮ, ಪರಮೇಶ್, ಶಿವಪ್ಪ, ಪರಶುರಾಮ, ಮಂಜುನಾಥ್, ದಾದಫೀರ್, ಶ್ರೀನಿವಾಸ, ತ್ರಿಲೋಕ, ತ್ರಿಗುಣ, ಎಂಬುವರ ವಿರುದ್ಧ‌ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸಿ ಆರ್ ಬಿ ಡಿವೈಎಸ್ ಪಿ ಬಿ.ಎಸ್.‌ಬಸವರಾಜ್ ನೇತೃತ್ವದಲ್ಲಿ ಕೆಟಿಜೆ ನಗರದ ಪಿಎಸ್ ಐ ಪ್ರಭು ಡಿ. ಕೆಳಗಿನಮನೆ, ಮಂಜುಳಾ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ದಾಳಿ ಮಾಡಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top