Connect with us

Dvgsuddi Kannada | online news portal | Kannada news online

ದಾವಣಗೆರೆ: ಇಸ್ಫೀಟ್ ಜೂಜು ಅಡ್ಡೆ‌ ಮೇಲೆ ದಾಳಿ; 6.02 ಲಕ್ಷ ವಶ

ದಾವಣಗೆರೆ

ದಾವಣಗೆರೆ: ಇಸ್ಫೀಟ್ ಜೂಜು ಅಡ್ಡೆ‌ ಮೇಲೆ ದಾಳಿ; 6.02 ಲಕ್ಷ ವಶ

ದಾವಣಗೆರೆ: ನಗರ ಎಂಸಿಸಿ ಬಿ ಬ್ಲಾಕ್ ಮನೆಯೊಂದರಲ್ಲಿ ಇಸ್ಫೀಟ್ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಒಟ್ಟು 6 ಲಕ್ಷದ 2 ಸಾವಿರ ವಶಕ್ಕೆ ಪಡೆಯಲಾಗಿದೆ.

ನಗರದ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಡಿಸಿಆರ್ ಬಿ ಡಿವೈಎಸ್ ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆ ದಾಳಿ ಮಾಡಲಾಗಿದೆ. ಎಂಸಿಸಿ ಬಿ ಬ್ಲಾಕ್ ನ 10 ಮೇನ್ 3 ನೇ ಕ್ರಾಸ್ ನ ಹೆಬ್ಬೆಟ್ಟು ವಿರೇಶ್ ಎಂಬುವರ ಮನೆಯ ಕೊಠಡಿಯಲ್ಲಿ‌‌ ಜೂಜು ನಡೆಯುತ್ತಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾದ ಅಭಿನಂದನ್, ಪ್ರವೀಣ್ ಕುಮಾರ್, ಮಂಜುನಾಥ್ , ರಹಮತುಲ್ಲಾ, ಹನುಮಂತಪ್ಪ, ಕರ್ಣ, ಯಮುನಪ್ಪ, ಚಂದ್ರಶೇಖರ ಹಾಗೂ ಹೆಬ್ಬೆಟ್ಟು ವಿರೇಶ್ ನನ್ನು ಹಿಡಿದು 6.02 ಲಕ್ಷ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top