ದಾವಣಗೆರೆ: ಶಿವಮೊಗ್ಗದ ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ, ಪ್ರಕರಣದ ಇಬ್ಬರು ಆರೋಪಿಗಳಾದ ಹರಿಹರ ತಾ. ಭಾನುವಳ್ಳಿ ಗ್ರಾಮದ ಆಂಜನೇಯನನ್ನು ಹತ್ಯೆ ಮಾಡಿ, ಮಧು ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿಗಳ ಪೈಕಿ ಐವರನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ನೆರೆಯ ಶಿವಮೊಗ್ಗದ ಸುನಿಲ್ ಅಲಿಯಾಸ್ ತಮಿಳು ಸುನಿಲ್ (30 ವರ್ಷ), ಪವನ್ ಅಲಿಯಾಸ್ ಡ್ಯಾನಿ(24), ಅಭಿಲಾಷ್ ಅಲಿಯಾಸ್ ಜಂಗಲ್ (22), ವೆಂಕಟೇಶ(22)
ಎಂಬುವರು ಮಾ.15ರಂದು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೃತ್ಯಕ್ಕೆ ಸಂಬಂಧಿಸಿ ಹಾವೇರಿ ಜಿಲ್ಲೆ ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ಶರಣಾಗುದ್ದರು. ನ್ಯಾಮತಿ ಪೊಲೀಸರು ಐವರನ್ನೂ ತಮ್ಮ ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಶಿವಮೊಗ್ಗದಹಂದಿ ಅಣ್ಣಿ
ಹತ್ಯೆ ಪ್ರಕರಣದ ಆರೋಪಿಗಳಾದ ಹರಿಹರ ತಾ.ಭಾನುವಳ್ಳಿ ಗ್ರಾಮದ ಆಂಜನೇಯ ಹಾಗೂ ಮಧು ಶಿವಮೊಗ್ಗದ
ನ್ಯಾಯಾಲಯಕ್ಕೆ ಮಾ.15ರಂದು ಹಾಜರಾಗಿ, ಬೈಕ್‌ನಲ್ಲಿ ತಮ್ಮ ಊರಿಗೆ ಮರಳುತ್ತಿದ್ದ ವೇಳೆ ನ್ಯಾಮತಿ ಠಾಣೆ
ವ್ಯಾಪ್ತಿಯಶಿವಮೊಗ್ಗ-ಹೊನ್ನಾಳಿರಸ್ತೆಯ ಗೋವಿನಕೋಟಿ ಹಿರೇಹಳ್ಳಿದ ಬಳಿ ನಾಲ್ವರು ಆರೋಪಿಗಳು ಮಚ್ಚು, ಲಾಂಗ್‌ಗಳಿಂದ ಹಲ್ಲೆ ಮಾಡಿದ್ದರು.