Connect with us

Dvgsuddi Kannada | online news portal | Kannada news online

ದಾವಣಗೆರೆ: ಪ್ರಧಾನಿ ಮೋದಿ ಆಗಮನ; ವಾಹನ ಸಂಚಾರ ನಿಷೇಧ- ಖಾಸಗಿ, ಕೆಎಸ್‌.ಆರ್‌ಟಿಸಿ ನಿಲ್ದಾಣ ಸ್ಥಾಳಾಂತರ; ನಗರದ ಹೊರ ವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ

ಪ್ರಮುಖ ಸುದ್ದಿ

ದಾವಣಗೆರೆ: ಪ್ರಧಾನಿ ಮೋದಿ ಆಗಮನ; ವಾಹನ ಸಂಚಾರ ನಿಷೇಧ- ಖಾಸಗಿ, ಕೆಎಸ್‌.ಆರ್‌ಟಿಸಿ ನಿಲ್ದಾಣ ಸ್ಥಾಳಾಂತರ; ನಗರದ ಹೊರ ವಲಯದಲ್ಲಿ ಪಾರ್ಕಿಂಗ್ ವ್ಯವಸ್ಥೆ

ದಾವಣಗೆರೆ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಅಂಗವಾಗಿ ದಾವಣಗೆರೆಯಲ್ಲಿ ನಾಳೆ (ಮಾ.25) ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಸಮಾರಂಭ ನಡೆಯುವ ಸ್ಥಳದ ಸುತ್ತಮುತ್ತ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಗೆ ಬರುವ ಮಕ್ಕಳು ತಮ್ಮೊಂದಿಗೆ ಹಾಲ್‌ಕೇಟ್ ಮತ್ತು ಗುರುತಿನ ಚೀಟಿಯನ್ನು ಕಡ್ಡಾಯವಾಗಿ
ಜೊತೆಯಲ್ಲಿಟ್ಟುಕೊಳ್ಳುವುದು ಹಾಗೂ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪೊಲೀಸರು ಯಾವುದೇ ಅಡಚಣೆ ಮಾಡದೆ ಪರೀಕ್ಷೆಗೆ ಸಂಪೂರ್ಣ ಅನುಕೂಲ ಮಾಡಿಕೊಡಲಾಗುವುದು.

ದಾವಣಗೆರೆ ನಗರದಲ್ಲಿ ಎಲ್ಲಾ ಖಾಸಗಿ ಮತ್ತು ಕೆಎಸ್‌.ಆರ್‌ಟಿಸಿ ಬಸ್‌ಗಳ ಬಸ್‌ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ನಗರದಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ. ನಗರದಲ್ಲಿ ದಿನಾಂಕ:25-03-2023ರಂದು ಎಲ್ಲಾ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪ್ರಧಾನ ಮಂತ್ರಿ ಭಾಗವಹಿಸುವ ಕಾರ್ಯಕ್ರಮ ನಡೆಯುವ ಸ್ಥಳದಿಂದ 2 ಕಿ.ಮೀ ವ್ಯಾಪ್ತಿಯ ಸುತ್ತಳತೆಯಲ್ಲಿ ಯಾವುದೇ ರೀತಿಯ ಡೋನ್ ಹಾರಾಟವನ್ನು ಸಂಪೂರ್ಣ ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿದೆ. ವಿವಿಧ ಜಿಲ್ಲೆಯಿಂದ 10 ಲಕ್ಷ ಜನ ಸೇರುವ ನಿರೀಕ್ಣೆ ಇದೆ.

ದಿನಾಂಕ 25-03-2023ರಂದು ಪ್ರಧಾನ ಮಂತ್ರಿಯವರು ನಗರಕ್ಕೆ ಭೇಟಿ ನೀಡುತ್ತಿರುವ ಪ್ರಯುಕ್ತ ಸಂಚಾರ ಮಾರ್ಗ ವ್ಯವಸ್ಥೆಯಲ್ಲಿ ಮಾಡಿರುವ ಕೆಲವು ಬದಲಾವಣೆಗಳು. ಇತರೆ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳ ಪಾರ್ಕಿಂಗ್ ಸ್ಥಳಗಳ ವಿವರೀ ರೀತಿ ಇದೆ.

ಚಿಕ್ಕಮಂಗಳೂರು, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಶೃಂಗೇರಿ, ಬೆಂಗಳೂರು, ಕೋಲಾರ, ತುಮಕೂರು,ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಗಳೂರು ಜಿಲ್ಲೆಗಳಿಂದ ಬಾಡಾ ಕ್ರಾಸ್‌ನಿಂದ ದಾವಣಗೆರೆನಗರಕ್ಕೆ ಪ್ರವೇಶ ಮಾಡುವ ವಾಹನಗಳಿಗೆ ಎಪಿಎಂಸಿ ಮತ್ತು ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.

ಚನ್ನಗಿರಿ, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಮಂಗಳೂರು ಕಡೆಯಿಂದ ಹದಡಿ ರಸ್ತೆ ಮೂಲಕ ಬರುವ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳನ್ನು ಡಿಆರ್‌ಎಂ ಸೈನ್ಸ್ ಕಾಲೇಜ್, ಹೈಸ್ಕೂಲ್ ಮೈದಾನ, ಯು.ಬಿ.ಡಿ. ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.

ಹುಬ್ಬಳ್ಳಿ, ದಾರಾವಾಡ, ಬೆಳಗಾವಿ, ಗದಗ, ಹಾವೇರಿ, ಹರಿಹರ ಕಡೆಯಿಂದ ಬೈಪಾಸ್ ರಸ್ತೆ ಮುಖಾಂತರ ಹಳೆ ಕುಂದುವಾಡ ಕಡೆಯಿಂದ ಬರುವ ವಾಹನಗಳನ್ನು ಕುಂದುವಾಡ ಕೆರೆ ಹತ್ತಿರದ ಜಾಗದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.

ಹರಪನಹಳ್ಳಿ-ಬಳ್ಳಾರಿ ವಿಜಯನಗರ ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್, ಕಲ್ಬುರ್ಗಿ, ಗದಗ, ಯಾದಗಿರಿ,ಹೊಸಪೇಟೆ ಕಡೆಯಿಂದ ಬರುವ ವಾಹನಗಳು ಕೊಂಡಜ್ಜಿ, ಆವರಗೊಳ್ಳ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ ಬರುವ ವಾಹನಗಳನ್ನು ಕೇಂದ್ರೀಯಾ ವಿದ್ಯಾಲಯದ ಜಾಗದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ

ಚಳ್ಳಕೆರೆ, ಮೊಳಕಾಲ್ಕೂರು, ಕೂಡ್ಲಿಗಿ ಜಿಲ್ಲೆಗಳಿಂದ ಜಗಳೂರು ರಸ್ತೆ ಮೂಲಕ ಬರುವ ವಾಹನಗಳನ್ನು ಬಡಗಿ ಕೃಷ್ಣಪ್ಪ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇರುತ್ತದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top