ದಾವಣಗೆರೆ: ಇಂದು (ಅ.8 ) ದಾವಣಗೆರೆ ತಾಲ್ಲೂಕಿನ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯತ್, ದಾವಣಗೆರೆ ಮಹಾನಗರಪಾಲಿಕೆಯ ವಾರ್ಡ್‍ಗಳು ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ 38 ಸಾವಿರ ಕೋವಿಶೀಲ್ಡ್ ಹಾಗೂ 2000 ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 40 ಸಾವಿರ ಡೋಸ್ ಲಸಿಕೆ ಲಭಯವಿದೆ. ಲಸಿಕೆ ಹಾಕಿಸಿಕೊಳ್ಳದ ಸಾರ್ವಜನಿಕರು ಕೂಡಲೇ ನಿಮ್ಮ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಹಾಕಿಸಿಕೊಳ್ಳಿ.
18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ವ್ಯಕ್ತಿಗಳು ಮೊದಲ ಹಾಗೂ ಎರಡನೆ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ನಗರದ 43 ಗ್ರಾಮ ಪಂಚಾಯತ್ ಗಳಿಗೆ 12,900 ಕೋವಿಶೀಲ್ಡ್, ನಗರಪಾಲಿಕೆಯ 45 ವಾರ್ಡ್‍ಗಳಿಗೆ 22,500 ಕೋವಿಶೀಲ್ಡ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 400 ಕೋವಿಶೀಲ್ಡ್, 9 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 1700 ಕೋವಿಶೀಲ್ಡ್ ಹಾಗೂ 2 ಸಾವಿರ ಕೋವ್ಯಾಕ್ಸಿನ್, ಚಿಗಟೇರಿ ಜಿಲ್ಲಾಸ್ಪತ್ರೆಗೆ 500 ಕೋವಿಶೀಲ್ಡ್ ಲಸಿಕೆ ಹಂಚಿಕೆ ಮಾಡಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ 1ನೇ ಅಥವಾ 2ನೇ ಡೋಸ್ ಲಸಿಕೆ ತಪ್ಪದೆ ಪಡೆಯುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಲ್.ಡಿ.ವೆಂಕಟೇಶ್ ಮನವಿ ಮಾಡಿದ್ದಾರೆ.



