ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ಕರ್ಫ್ಯೂ ಜಾರಿಗೊಳಿಸಿದೆ. ಕರ್ಫ್ಯೂ ಜಾರಿ ಮಾಡಿದ್ದರೂ ಅನವಶ್ಯಕವಾಗಿ ಓಡಾಟ ಮಾಡುವ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ಸೋಮವಾರದಿಂದ (ಮೇ 10) ಅಘೋಷಿತ ಲಾಕ್‌ಡೌನ್ ಘೋಷಿಸಿದೆ. ಇದರ ಬೆನ್ನಲ್ಲೇ ದಾವಣಗೆರೆಯಲ್ಲಿ ಇಂದಿನಿಂದಲೇ ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸರು ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ಸಾರ್ವಜನಿಕರನ್ನು ತಡೆದು, ಓಡಾಟಕ್ಕೆ ಕಾರಣ ಕೇಳಿ, ಅನಗತ್ಯವಾಗಿ ಓಡಾಡುತ್ತಿದ್ದರೆ ಬೈಕ್‌ಗಳನ್ನು ವಶಕ್ಕೆ ಪಡೆಯುತ್ತೇವೆ. ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಅನಗತ್ಯವಾಗಿ ಓಡಾಡುವಂತಿಲ್ಲ ಎಚ್ಚರಿಕೆ ನೀಡಿದರು.
ನಗರದ ಹದಡಿ ರಸ್ತೆ, ಅರುಣ ಸರ್ಕಲ್, ಜಯದೇವ ವೃತ್ತ , ಐಟಿಐ ಕಾಲೇಜು ರಸ್ತೆ, ಗುಂಡಿ ಸರ್ಕಲ್, ಕೊಂಡಜ್ಜಿ ರೋಡ್, ಆರ್ ಟಿಒ ಆಫೀಸ್, ಆವರಗೆರೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿಕೊಂಡು ನಿಂತಿರುವ ಪೊಲೀಸರು, ಅನಗತ್ಯವಾಡಿ ಓಡಾಡುವವರ ಗಾಡಿ ಕಿತ್ತುಕೊಂಡು ಕಳುಹಿಸುತ್ತಿದ್ದಾರೆ. ವಶಕ್ಕೆ ಪಡೆದಿದ 50ಕ್ಕೂ ಹೆಚ್ಚು ಬೈಕ್‌ಗಳನ್ನು ನಗರದ ಡಿಎಆರ್ ಗ್ರೌಂಡ್‌ನಲ್ಲಿ ಇರಿಸಲಾಗಿದ್ದು, ಬೈಕ್ ಕೊಟ್ಟು ಬಂದಿದ್ದ ಬೈಕ್ ಸವಾರರು ಇಲ್ಲಿಗೆ ಬಂದು ದಂಡ ಕಟ್ಟಿ ಬೈಕ್ ಬಿಡಿಸಿಕೊಳ್ಳತ್ತಿದ್ದರು.