Connect with us

Dvgsuddi Kannada | online news portal | Kannada news online

ದಾವಣಗೆರೆ: ಪಕ್ಷೇತರ ಸ್ಫರ್ಧೆಗೆ ಒತ್ತಡ; ಚರ್ಚೆ ಬಳಿಕ ಅಂತಿಮ ನಿರ್ಧಾರ; ಕುಟುಂಬ ರಾಜಕಾರಣ ವಿರುದ್ಧ ನನ್ನ ಹೋರಾಟ; ವಿನಯ್ ಕುಮಾರ್

ದಾವಣಗೆರೆ

ದಾವಣಗೆರೆ: ಪಕ್ಷೇತರ ಸ್ಫರ್ಧೆಗೆ ಒತ್ತಡ; ಚರ್ಚೆ ಬಳಿಕ ಅಂತಿಮ ನಿರ್ಧಾರ; ಕುಟುಂಬ ರಾಜಕಾರಣ ವಿರುದ್ಧ ನನ್ನ ಹೋರಾಟ; ವಿನಯ್ ಕುಮಾರ್

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜನರು ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಎಲ್ಲಾ ವಿಚಾರ ಚರ್ಚೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ನನ್ನದು ಪಾಳೇಗಾರಿಕೆ, ಕುಟುಂಬ ರಾಜಕಾರಣ ವಿರುದ್ಧದ ಹೋರಾಟ ಎಂದು ಕಾಂಗ್ರೆಸ್ ಯುವ ಮುಖಂಡ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಲ್ಲದ ಮನಸ್ಸಿನಿಂದ ಟಿಕೆಟ್ ಸಿಕ್ಕಿದೆ. ಹೈಕಮಾಂಡ್ ಸೂಚನೆ ಮೆರೆಗೆ ಚುನಾವಣೆ ಎದುರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ಅವರಿಗೆ ಒಲ್ಲದ ಮನಸ್ಸಿದ್ದರೆ ಸಚಿವರು ನನಗೆ ಟಿಕೆಟ್ ಕೊಡಿಸಲಿ.ಈಗಲೂ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ನಾನು ಎರಡು ಲಕ್ಷ ಮತ ಅಂತರದಲ್ಲಿ ಗೆದ್ದು ಬರುತ್ತೇನೆ. ನಾವು ಟಿಕೆಟ್ ಕೇಳಿರಲಿಲ್ಲ. ಹೈಕಮಾಂಡ್ ಸರ್ವೇ ಆಧರಿಸಿ ನೀಡಿದೆ. ನೀವು ಸ್ಪರ್ಧೆ ಮಾಡಬೇಕೆಂದು ಹೇಳಿದ ಕಾರಣಕ್ಕೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಣಕ್ಕಿಳಿಸಲಾಗಿದೆ ಎಂದಿದ್ದಾರೆ. ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಟಿಕೆಟ್ ಬೇಡ ಎಂದರೆ ನಿನಗೆ ಟಿಕೆಟ್ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ ನನಗೆ ಹೇಳಿದ್ದರು.

ಎಸ್. ಎಸ್. ಮಲ್ಲಿಕಾರ್ಜುನ್ ತಮಗೆ ಬೇಡವೆಂದು ಹಿಂದುಳಿದ ನಾಯಕನಿಗೆ ಕೊಡಿಸಿದ್ರೆ, ಹಿಂದುಳಿದ‌ ನಾಯಕ ಬೆಳೆಸಿದ ಕೀರ್ತಿಸಲ್ಲುತ್ತಿತ್ತು. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡಿರುವ ನಿರ್ದರ್ಶನ ಇವೆ. ಈಗಲೂ ಹೈಕಮಾಂಡ್ ಮನಸ್ಸು ಮಾಡಿದರೆ ನನಗೆ ಟಿಕೆಟ್ ನೀಡಬಹುದು. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವೆ ನಡೆಸುತ್ತಿದ್ದೇನೆ. 620ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದೇನೆ. ಟಿಕೆಟ್ ಕೈ ತಪ್ಪಿದ ಬಳಿಕ ಮತ್ತೆ ಗ್ರಾಮಗಳಿಗೆ ಹೋಗುತ್ತಿದ್ದೇನೆ. ನಿಮಗೆ ಅನ್ಯಾಯವಾಗಿದೆ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಇನ್ನೂ ನಿರ್ಧಾರ ಮಾಡಿಲ್ಲ ಗೆಲ್ಲುವ ಸರ್ವೇ ಬಂದರೆ ಸ್ಪರ್ಧೆ ಮಾಡುತ್ತೇನೆ ಎಂದರು.

ಸಚಿವ ಮಲ್ಲಿಕಾರ್ಜುನ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿನಯ್ ಕುಮಾರ್ ದಾವಣಗೆರೆ ಅವರಲ್ಲ ಎಂದಿದ್ದಾರೆ. ನಾನು ಹುಟ್ಟಿದ್ದು, ಬೆಳೆದಿದ್ದು ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿಯೇ. ಇದೇ ಬಾಪೂಜಿ ಆಸ್ಪತ್ರೆಯಲ್ಲಿಯೇ ಜನಿಸಿದ್ದು. ಸಾವಿರಾರು ಜನರು ರಕ್ತ ಸಂಬಂಧಿಗಳೂ ಇದ್ದಾರೆ. ತಂದೆ ತಾಯಿ ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾರದಾ ವಿದ್ಯಾಪೀಠದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಅಭ್ಯಾಸ ಮಾಡಿದ್ದೇನೆ. ಸೆೇಟ್ ಫಾಲ್ಸ್ ಸ್ಕೂಲ್ ನಲ್ಲಿ ನವೋದಯ ಪರೀಕ್ಷೆ ಬರೆದು ಪಾಸ್ ಆಗಿದ್ದೆ. ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಹೋಗಿ ಬಿಎಸ್ಸಿ ಸೇರಿಕೊಂಡೆ ಎಂದು ವಿವರಿಸಿದರು.

ಕಳೆದ ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಯಾರೂ ಫೋನ್ ಮಾಡಿಲ್ಲ, ಕರೆದಿಲ್ಲ. ಹಾಗಾಗಿ ಹೋಗಿಲ್ಲ. ಬೆಳವಣಿಗೆ ತೋರಿಸಿದಾಗ ನಮ್ಮವರಲ್ಲ ಎಂದು ದೂರ ಇಡುವ ಕೆಲಸ ಇದಾಗಿದೆ. ದಾವಣಗೆರೆಯವರಲ್ಲ ಎಂದಾಗ ಜಾತಿ ಎತ್ತಿ ಮಾತನಾಡಲು ಆಗಲ್ಲ‌. ನನಗಷ್ಟೇ ಅಲ್ಲ, ಸಮಾಜಕ್ಕೆ ಆದ ಅವಮಾನ. ಇದು ತುಂಬಾ ಬೇಸರ ತಂದಿದೆ ಎಂದರು.

ಸಿದ್ದರಾಮಯ್ಯ ಸೂಚನೆ ಕೊಟ್ಟ ಬಳಿಕ ಅವರು ಬಂದು ನನಗೆ ಹೇಳಿದರು. ಆ ನಂತರವೇ ನಾನು ಹೆಚ್ಚಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಸಿದ್ದರಾಮಯ್ಯ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನ ಶಕ್ತಿ‌‌‌. ದೆಹಲಿಯಲ್ಲಿಯೂ ನನ್ನ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯರ ಆಶೀರ್ವಾದ ಇಲ್ಲದಿದ್ದರೆ ರಾಜಕಾರಣದಲ್ಲಿ ಇಷ್ಟು ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top