ದಾವಣಗೆರೆ:ಹರಿಹರ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ, ಮಾಜಿ ಶಾಸಕ ಶಿವಶಂಕರ್ ಅವರ ಬೆಂಬಲಿಗ ಜೆಡಿಎಸ್ ನ ಹಾಲೇಶ್ ಗೌಡ ಇಂದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಹರಿಹರ ಶಾಸಕ ಎಸ್.ರಾಮಪ್ಪ ಅವರು ಪಕ್ಷದ ಧ್ವಜ ಹಾಗೂ ಶಾಲನ್ನು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ವೇಳೆ ಜೆಡಿಎಸ್ ದಲಿತ ನಾಯಕ ಎಂ.ಡಿ.ನಾಗರಾಜ್ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಟಿ.ಜೆ.ಮುರುಗೇಶ್, ಹರಿಹರ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಎಲ್.ಬಿ.ಹನುಮಂತಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ.ಶಾಂತರಾಜ್, ಹನಗವಾಡಿ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸಾರಥಿ ಉಮೇಶ್, ಗುತ್ತೂರು ಪೈಲ್ವಾನ್ ಬಸಪ್ಪ, ಗಂಗಪ್ಪ, ದಂಡೆಪ್ಪ, ಕೊಂಡಜ್ಜಿ ವಿಜಯಕುಮಾರ್, ಮಾರುತಿ, ಶ್ರೀನಿವಾಸ್ ಚಿನ್ನಿಕಟ್ಟೆ, ಕೋಮಲ್ ಜೈನ್, ಜವಳಿ ಪಾರ್ಕ್ ವಿಶ್ವನಾಥ್, ಎಸ್ಸೆಸ್ಸೆಂ ಗಾರ್ಮೇಂಟ್ಸ್ ನ ಶ್ರೀನಿವಾಸ್, ಯಶವಂತರಾವ್, ಪ್ರವೀಣ್ ಕುಮಾರ್ ಬಿ., ಶ್ರೀಕಾಂತ್ ಬಗರೆ ಮತ್ತಿತರರು ಉಪಸ್ಥಿತರಿದ್ದರು.