ದಾವಣಗೆರೆ: ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಿಗಳ ಸಭೆ ಮುಗಿಯುತ್ತಿದ್ದಂತೆ ಹೊರಡಲು ಅಣಿಯಾದ ಎಸ್ಪಿ ಅವರನ್ನು ನೋಡಿ ಗರಂ ಆದ ಸಿಎಂ ಸಿದ್ದರಾಮಯ್ಯ, ‘ಏ ಕುಳಿತ್ಕೋ.. ನಾನೇ ಇನ್ನೂ ಕುಳಿತಿದ್ದೀನಿ’ ಏನು ಎಸ್ಪಿನಾ ನೀನು? ಕುಳಿತ್ಕೋ.. ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮಗಿಂತ ಮೊದಲು ಎಸ್ಪಿ ಎದ್ದಿದ್ದಕ್ಕೆ ಸಿಎಂ ಸಿಟ್ಟಾಗಿದ್ದರು.
ಸಿಎಂ ಸಿಟ್ಟಾಗಿದ್ದು ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ನೋಡಿ.. ಏನು ಎಸ್ಪಿನಾ ನೀನು? ಕುಳಿತ್ಕೋ..’ ನಾನು ಎದ್ದ ಮೇಲೆ ಎದ್ದು ಹೋಗುವಂತೆ ಎಂದು ತಾಕೀತು ಮಾಡಿದರು. ಜಿಲ್ಲೆಯಲ್ಲಿ ನೈತಿಕ ಪೊಲೀಸ್ಗಿರಿ ನಡೆಯದಂತೆ ಕ್ರಮವಹಿಸಲು ಸೂಚನೆ ನೀಡಿದ ಅವರು, ಯಾವುದೇ ಕಾರಣಕ್ಕೂ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.



