ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ (ನ.08) ಹಾಗೂ ನಾಡಿದ್ದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ನವೆಂಬರ್ 8 ರಂದು ರಾತ್ರಿ ಹೊಸದರ್ಗ ತಾಲೂಕು ಸಾಣೇಹಳ್ಳಿಯಿಂದ ಹೊರಟು ರಾತ್ರಿ 10 ಗಂಟೆಗೆ ದಾವಣಗೆರೆಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.ನವೆಂಬರ್ 9 ರಂದು ಬೆಳಿಗ್ಗೆ 9.15ಕ್ಕೆ ಜಿಎಂ ಐಟಿ ಹೆಲಿಪ್ಯಾಡ್ ನಿಂದ ಹೊನ್ನಾಳಿ ತಾಲ್ಲೂಕಿನ ಹೆಚ್ ಕಡದಕಟ್ಟೆ ಗೆ ಪ್ರಯಾಣ ಬೆಳಿಸಿ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿ ಪಟ್ಟಣದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶಿ೯ ಎಂ ಪಿ ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹೆಚ್ ಕಡದಕಟ್ಟೆ ಹೆಲಿಪ್ಯಾಡ್ ನಿಂದ ಬೆಳಗಾವಿ ಜಿಲ್ಲೆ ರಾಯಬಾಗಕ್ಕೆ ಪ್ರಯಾಣ ಬೆಳಸಲಿದ್ದಾರೆ ಎಂದ ಮುಖ್ಯಮಂತ್ರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.