ದಾವಣಗೆರೆ: ರಾಜ್ಯ ಅಡಿಕೆ ( arecanut) ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆ ಪಡೆದಿರುವ ಜಿಲ್ಲೆಯ ಚನ್ನಗಿರಿಯ ತೋಟ ಉತ್ಪನ್ನಗಳ ಮಾರಾಟ ಸಹಕಾರಿ ಸಂಘ (ತುಮ್ಕೋಸ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಎಚ್.ಎಸ್.ಶಿವಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆ: ಮನೆಕಳ್ಳತನ ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಆರೋಪಿ ಬಂಧನ; 5.50 ಲಕ್ಷ ಮೌಲ್ಯದ ಸ್ವತ್ತು ವಶ
ಶಿವಕುಮಾರ್ ಅವರ ಆಯ್ಕೆ ಘೋಷಣೆ ಆಗುತ್ತಿದ್ದಂತೆ ತುಮ್ಕೋಸ್ ಆವರಣದಲ್ಲಿ ನೆರೆದಿದ್ದ ಶಿವಕುಮಾರ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಸಿ ಸಿಹಿ ಹಂಚಿದರು.ಶಿವಕುಮಾರ್ ಅವರ ಹೆಸರನ್ನು ನಿರ್ದೇಶಕರಾದ ಟಿ.ವಿ. ರಾಜು ಹಾಗೂ ಎಚ್.ಎಸ್. ಮಂಜುನಾಥ್ ಅನುಮೋದಿಸಿದರು. ಎಚ್. ಎಸ್ . ಶಿವಕುಮಾರ್ ಅವರು ಮುಂದಿನ 5 ವರ್ಷಗಳ ಅವಧಿಗೆ ತುಮ್ಕೋಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುಳಾ ಘೋಷಿಸಿದರು.
ಮಾ.22ರಿಂದ ಎರಡ್ಮೂರು ದಿನ ಗುಡುಗು ಸಹಿತ ಮಳೆ ಮುನ್ಸೂಚನೆ
ನೂತನವಾಗಿ ಆಯ್ಕೆಯಾದ 15 ನಿರ್ದೇಶಕರಿಗೂ ಪ್ರಮಾಣ ಪತ್ರವನ್ನು ವಿತರಿಸಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಶಿವಕುಮಾರ್ ಮೂರನೇ ಬಾರಿಗೆ ತುಮ್ಕೋಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತುಮ್ಕೋಸ್ ವ್ಯವಸ್ಥಾಪಕ ನಿರ್ದೇಶಕ ಮಧು, ನಿರ್ದೇಶಕರಾದ ಟಿ.ವಿ. ರಾಜು, ಎಂ.ಎನ್. ಗಂಗಾಧರಪ್ಪ, ವಿಜಯಕುಮಾರ್ ಗೌಡ್ರು, ಎನ್. ಲೋಕೇಶ್ವರಪ್ಪ, ಎಲ್.ವಿ. ಶೋಭಾ, ಮೀನಾಕ್ಷಿ, ಚನ್ನಬಸಪ್ಪ, ರಘು ಎಸ್. ನಾಯ್ಕ, ಎಚ್.ಎಸ್. ಮಂಜುನಾಥ್ ಇದ್ದರು.



