ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆಯ (ಶಾಂತಿ ಸಾಗರ, sulekere) ಗುಡ್ಡಕ್ಕೆ ಬೆಂಕಿ (Fire to the forest) ಬಿದ್ದಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
- ಸೂಳೆ ಕೆರೆ ಗುಡ್ಡಕ್ಕೆ ಆಕಸ್ಮಿಕ ಬೆಂಕಿ
- ಸೂಳೆ ಯಾತ್ರಿನಿವಾಸದ ಹಿಂಭಾಗದ ಗುಡ್ಡಕ್ಕೆ ಬೆಂಕಿ
- ಅಪಾರ ಪ್ರಮಾಣದ ಅರಣ್ಯ ನಾಶ
- ಬೆಂಕಿ ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ
ಗುಡ್ಡಕ್ಕೆ ದನಕಾಯಲು ಹೋದ ಕಿಡಿಗೇಡಿಗಳು ಬೀಡಿ ಸೇದಿ ಎಸೆದ ಕಡ್ಡಿಯಿಂದ ಒಣಗಿದ ಎಲೆ, ಹುಲ್ಲಿಗೆ ಬೆಂಕಿ ಹೊತ್ತಿದ್ದು, ಸೂಳೆಕೆರೆಯ ಯಾತ್ರಿನಿವಾಸದ ಹಿಂಭಾಗದ ಗುಡ್ಡಕ್ಕೆ ಬೆಂಕಿ ಆವರಿಸಿದೆ. ಇದರಿಂದ ಅಪಾರ ಪ್ರಮಾಣದ ಅರಣ್ಯ ಸುಟ್ಟು ಹೋಗಿದೆ. ಬೆಂಕಿಯು ಅರಿಶಿನಘಟ್ಟ ಹಾಗೂ ಬಸವರಾಜಪುರ ಗ್ರಾಮದವರೆಗೂ ಹರಡಿದೆ. ಗುಡ್ಡದಲ್ಲಿದ್ದ ವನ್ಯ ಜೀವಿಗಳು, ಪಕ್ಷಿ ಸಂಕುಲಕ್ಕೂ ಜೀವ ಹಾನಿಯಾಗಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ತಂಡದ ನಿರಂತರ ಪರಿಶ್ರಮದಿಂದ ಬೆಂಕಿ ನಂದಿಸಲಾಗಿದೆ.



