ದಾವಣಗೆರೆ: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 15 ಲಕ್ಷ ಮೌಲ್ಯದ 510 ಕೆ.ಜಿ. ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಒರ್ವ ಆರೋಪಿಯನ್ನು ಬಂಧಿಸಲಾಗಿದೆ.
ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ( ಜು.13) ರಾತ್ರಿ 12.15ರ ವೇಳೆಗೆ ಪಟ್ಟಣದ ಕೌಸ ಮಸೀದಿ ಬಳಿಯ ಮನೆಯೊಂದರಲ್ಲಿ ರಕ್ತ ಚಂದನ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ. ದಾಳಿಯಲ್ಲಿ 15 ಲಕ್ಷ ಮೌಲ್ಯದ 510 ಕೆ.ಜಿ. ರಕ್ತ ಚಂದನ ತುಂಡುಗಳನ್ನು ವಶಕ್ಕೆ ಪಡೆದು ಒರ್ವ ಆರೋಪಿಯನ್ನು ಬಂಧಿಸಲಾಗಿದೆ.
ಚನ್ನಗಿರಿ ಉಪ ವಿಭಾಗದ ಡಿವೈಎಸ್ ಪಿ ಡಾ.ಸಂತೋಷ ಮಾರ್ಗದರ್ಶನದಲ್ಲಿ ನಿರೀಕ್ಷಕ ಮಧು ಪಿ.ಬಿ. ನೇತೃತ್ವದಲ್ಲಿ ಪಿಎಸ್ ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ರಂಗಪ್ಪ, ಹಾಲೇಶ್ ಹಿರೇಮಠ, ಶ್ರೀನಿವಾಸ ಮೂರ್ತಿ, ನರೇಂದ್ರಸ್ವಾಮಿ, ಮೊಹ್ಮದ್ ಖಾನ್, ರವಿಕುಮಾರ್ , ರೇವಣ ಸಿದ್ದಪ್ಪ, ಅರುಣಕುಮಾರ್ , ಮೋಹನ್ , ಸಂತೋಷ ರೇವಣಸಿದ್ದಪ್ಪ, ಪರಮೇಶ್ ನಾಯ್ಕ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಾಚರಣೆಗೆ ಎಸ್ ಪಿ ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



