ದಾವಣಗೆರೆ: 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಳ‌ಮೀಸಲಾತಿ ಸಮೀಕ್ಷೆ ಶುರು; ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಪರಿಶಿಷ್ಟ ಜಾತಿ ಒಳಮೀಸಲಾತಿ ಕುರಿತಂತೆ ನಿವೃತ್ತ ನ್ಯಾಯಮೂರ್ತಿ‌ ಹೆಚ್.ಎನ್. ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ವ್ಯಕ್ತಿ ವಿಚಾರಣಾ ಆಯೋಗವನ್ನು ರಚಿಸಲಾಗಿದ್ದು, ಪರಿಶಿಷ್ಟ ಜಾತಿಗಳ ವಿವಿಧ ಒಳಮೀಸಲಾತಿಯನ್ನು ವರ್ಗೀಕರಿಸಿ, ಉಪವರ್ಗೀಕರಣ ಕೈಗೊಳ್ಳಲು ಅವಶ್ಯವಿರುವ ದತ್ತಾಂಶವನ್ನು ಸಂಗ್ರಹಿಸಿ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಲಾಗಿದೆ.

ಕುಟುಂಬದ ಸಂಪೂರ್ಣ ಮಾಹಿತಿ‌‌ ನೀಡಿ

ಈ ಸಮೀಕ್ಷಾ ಕಾರ್ಯವನ್ನು ಮೇ. 05 ರಿಂದ 17ರವರೆಗೆ ಕೈಗೊಳ್ಳಲಾಗುತ್ತಿದ್ದು, ಸಮೀಕ್ಷಾ ಸಮಯದಲ್ಲಿ ಮನೆಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸುವುದರಿಂದ ಈ ದಿನಾಂಕಗಳಂದು ಮನೆಯ ಹಿರಿಯ ಸದಸ್ಯರು ಹಾಜರಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಕುಟುಂಬದ ಸಂಪೂರ್ಣ ಮಾಹಿತಿಯನ್ನು ಸಮೀಕ್ಷಾದಾರರಿಗೆ ನೀಡಿ ಸಹಕರಿಸಬೇಕು. ಮೇ.19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು. ಮೇ.19 ರಿಂದ 23 ರವರೆಗೆ ಸ್ವಯಂ ಘೋಷಣೆ(ಆನ್ ಲೈನ್ ಮೂಲಕ) ನಡೆಸಲಾಗುವುದು.

ಸ್ವಯಂಘೋಷಣೆಗೆ ಆಧಾರ್ ನಂಬರ್ ಹಾಗೂ ಆರ್.ಡಿ ನಂಬರ್ ಕಡ್ಡಾಯವಾಗಿರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಸಮೀಕ್ಷಾಧಾರರು, ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳ ನೇಮಿಸಲಾಗಿದೆ.

ಸಮೀಕ್ಷೆ ಅಧಿಕಾರಿಗಳ ವಿವರ

ದಾವಣಗೆರೆ ದಕ್ಷಿಣ-ಸಮೀಕ್ಷೆದಾರರ ಸಂಖ್ಯೆ 217, ಮೇಲ್ವಿಚಾರಕರ ಸಂಖ್ಯೆ 22 ಒಟ್ಟು 239, ದಾವಣಗೆರೆ ಉತ್ತರ ಸಮೀಕ್ಷೆದಾರರ ಸಂಖ್ಯೆ 245, ಮೇಲ್ವಿಚಾರಕರ ಸಂಖ್ಯೆ 25, ಒಟ್ಟು 270, ಮಾಯಕೊಂಡ ಸಮೀಕ್ಷೆದಾರರ ಸಂಖ್ಯೆ 240, ಮೇಲ್ವಿಚಾರಕರ ಸಂಖ್ಯೆ 23, ಒಟ್ಟು 263, ಜಗಳೂರು ಸಮೀಕ್ಷೆದಾರರ ಸಂಖ್ಯೆ 263, ಮೇಲ್ವಿಚಾರಕರ ಸಂಖ್ಯೆ 27, ಒಟ್ಟು 290, ಹರಿಹರ ಸಮೀಕ್ಷೆದಾರರ ಸಂಖ್ಯೆ 228, ಮೇಲ್ವಿಚಾರಕರ ಸಂಖ್ಯೆ 23 ಒಟ್ಟು 251, ಹೊನ್ನಾಳಿ ಸಮೀಕ್ಷೆದಾರರ ಸಂಖ್ಯೆ 245, ಮೇಲ್ವಿಚಾರಕರ ಸಂಖ್ಯೆ 24 ಒಟ್ಟು 269, ಚನ್ನಗಿರಿ ಸಮೀಕ್ಷೆದಾರರ ಸಂಖ್ಯೆ 255, ಮೇಲ್ವಿಚಾರಕರ ಸಂಖ್ಯೆ 26, ಒಟ್ಟು 281 ಇರುತ್ತದೆ.

ಮೇ 3 ರಂದು 7 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆದಾರರು ಹಾಗೂ ಮೇಲ್ವಿಚಾರಕರುಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಗಣತಿದಾರರಿಂದ ಮನೆ-ಮನೆ ಸಮೀಕ್ಷೆ ಮುಕ್ತಾಯಗೊಂಡ ನಂತರ ಗುರುತಿಸಿರುವ ಮತಗಟ್ಟೆ ಪ್ರದೇಶದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು.

ಸಹಾಯವಾಣಿಗೆ ಸಂಪರ್ಕಿಸಿ

ಮತಗಟ್ಟೆ ಪ್ರದೇಶದಲ್ಲಿ ಗುರುತಿಸಿಸಿರುವ ವಿಶೇಷ ಶಿಬಿರಗಳಿಗೆ ಪರಿಶಿಷ್ಟ ಜಾತಿ ಜನಾಂಗದವರು ತೆರಳಿ ಗಣತಿದಾರರಿಗೆ ಜಾತಿ ಕುರಿತು ಮಾಹಿತಿಯನ್ನು ಮೇ.19 ರಿಂದ 21 ರವರೆಗೆ ಸಲ್ಲಿಸಲು ಅವಕಾಶವಿದೆ.ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ. ಕೊಠಡಿ ಸಂಖ್ಯೆ-37. ಜಿಲ್ಲಾಡಳಿತ ಭವನ, ಮೊದಲನೇ ಮಹಡಿ, ಬಿ. ಬ್ಲಾಕ್, ಕರೂರು ಕೈಗಾರಿಕಾ ಪ್ರದೇಶ, ದಾವಣಗೆರೆ ಇಲ್ಲಿನ ಸಹಾಯವಾಣಿ ದೂ.ಸಂ: 08192-231782ಗೆ ಸಾರ್ವಜನಿಕರು ಮತ್ತು ಸಮೀಕ್ಷಾದಾರರು, ಮೇಲ್ವಿಚಾರಕರು, ಅಧಿಕಾರಿಗಳು ಸಹಾಯವಾಣಿಗೆ ಸಂಪರ್ಕಿಸಿ ಸಮೀಕ್ಷೆಗೆ ಸಂಬಂಧಿಸಿದಂತೆ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ

ಮನೆ-ಮನೆ ಸಮೀಕ್ಷೆಗೆ ಸಮೀಕ್ಷೆದಾರರು ಆಗಮಿಸಿದಾಗ ಪರಿಶಿಷ್ಟ ಜಾತಿ ಕುಟುಂಬದವರು ರೇಷನ್ ಕಾರ್ಡ್ ನೀಡಬೇಕು. ಒಂದು ವೇಳೆ ರೇಷನ್ ಕಾರ್ಡ್ ಇಲ್ಲದಿದ್ದಲ್ಲಿ ಕೆವೈಸಿ ಆಗಿರುವಂತಹ ಆಧಾರ್ ಕಾರ್ಡ್ ನಂಬರ್ ನೀಡಬೇಕು. ಈ ಎರಡು ಇಲ್ಲದಿದ್ದಲ್ಲಿ ಆಧಾರ್ ಸೆಂಟರ್‍ಗೆ ತೆರಳಿ ಆಧಾರ್ ಕಾರ್ಡ್ ಮಾಡಿಸಿ, ಆಧಾರ್ ಎಂರೊಲ್‍ಮೆಂಟ್ ಸ್ವೀಕೃತಿ ಸಂಖ್ಯೆ ನೀಡಬೇಕು. ಹಾಗೂ ಜಾತಿ ಪ್ರಮಾಣ ಪತ್ರ ಲಭ್ಯವಿದ್ದಲ್ಲಿ ನೀಡವುದು. (ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿರುವುದಿಲ್ಲ) ಮನೆ-ಮನೆ ಸಮೀಕ್ಷೆಯಾದ ನಂತರ ಸ್ವಯಂ ದೃಢೀಕರಣ ಪತ್ರದಲ್ಲಿ ಮಾಹಿತಿ ನೀಡಿದ ಕುಟುಂಬದ ಮುಖ್ಯಸ್ಥರು/ಮಾಹಿತಿದಾರರ ಸಹಿ ಮಾಡಿ ನೀಡುವುದು ಮತ್ತು ಗಣತಿದಾರರ ಸಹಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *