ದಾವಣಗೆರೆ: ನಗರದ ರೈಲ್ವೆ ನಿಲ್ದಾಣದ ಮುಂಭಾಗ ಕ್ರಾಂತಿಕಾರಿ ಭಗತ್ ಸಿಂಗ್ ಅವರ 114 ನೇ ಜಯಂತೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ನಗರಾಧ್ಯಕ್ಷ ಪವನ್ ರೇವಣ್ಕರ್ , ಭಗತ್ ಸಿಂಗ್ ಅವರು ಸಣ್ಣ ವಯಸ್ಸಿನಲ್ಲೇ ಬ್ರಿಟೀಷರು ನಡೆಸಿದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಿಂದ ಮನಸ್ಸಿನಲ್ಲಿ ಜ್ವಾಲೆ ಉರಿಯಲು ಪ್ರಾರಂಭಿಸಿತು. ಒಪ್ಪಂದದ ಸ್ವಾತಂತ್ಯ ಎಂಬ ಭಿಕ್ಷೆ ಬ್ರಿಟೀಷರಿಂದ ನಮಗೆ ಬೇಡ, ನಮಗೆ ಬೇಕಿರುವುದು ಪೂರ್ಣ ಸ್ವರಾಜ್ಯ ಮಾತ್ರ, ಅಂಗ್ರೇಜೊ ಭಾರತ್ ಛೊಡೊ ಎಂಬ ಘೋಷಣೆ ಭಾರತದ ತುಂಬ ಮೊಳಗಿಸಿದರು ಎಂದರು.
ಹಿಂದೂ ಜಾಗರಣ ವೇದಿಕೆಯ ಶಿವಮೊಗ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರ್ ಮಾತನಾಡಿ, ಭಗತ್ ಸಿಂಗ್ ರವರಂತಹ ಕ್ರಾಂತಿ ಕಾರಿಗಳಿಂದ ಯುವ ಪೀಳಿಗೆಗಳು ಪ್ರೇರಣೆಯನ್ನು ಪಡೆದುಕೊಳ್ಳಬೇಕು, ಅಪ್ರತಿಮ ದೇಶ ಭಕ್ತರನ್ನ ಎಂದೂ ಮರೆಯಲು ಸಾಧ್ಯವೇ ಇಲ್ಲಾ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಬಿವಿಪಿ ಸದಸ್ಯರಾದ ಆಕಾಶ್,ಸುಮನ್, ಶಶಾಂಕ್,ನರೇಂದ್ರ, ಶರತ್, ಸಂಜಯ್, ರಾಜು, ಚಂದನ್, ಭರತ್, ಅಜಯ್ ಹಾಗೂ ಹಿಂಜಾವೇದವರಾದ ವಿಶ್ವನಾಥ್, ಮಂಜುನಾಥ್, ಚೇತನ್, ವಿಕಾಸ್, ಮನೋಜ್, ವೀರೇಶ್, ಶಿವಾಜಿ, ಸಿದ್ದು, ನಾಗರಾಜ್ ಇತರರಿದ್ದರು.