Connect with us

Dvgsuddi Kannada | online news portal | Kannada news online

ದಾವಣಗೆರೆ: ಪಿಎಸ್ ಐ ನೇಮಕಾತಿಗೆ ಅ. 03 ರಂದು ಲಿಖಿತ ಪರೀಕ್ಷೆ

ದಾವಣಗೆರೆ

ದಾವಣಗೆರೆ: ಪಿಎಸ್ ಐ ನೇಮಕಾತಿಗೆ ಅ. 03 ರಂದು ಲಿಖಿತ ಪರೀಕ್ಷೆ

ದಾವಣಗೆರೆ: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಪಿಎಸ್‍ಐ (ಸಿವಿಲ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅ. 03 ರ ಭಾನುವಾರದಂದು ಬೆಳಿಗ್ಗೆ 11 ಗಂಟೆಯಿಂದ 12.30 ಗಂಟೆಯವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 3 ರಿಂದ 4.30 ಗಂಟೆಯವರೆಗೆ ಪತ್ರಿಕೆ-2 ರ ಲಿಖಿತ ಪರೀಕ್ಷೆಯನ್ನು ದಾವಣಗೆರೆ ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಪರೀಕ್ಷಾ ಕೇಂದ್ರ ಹಾಗೂ ನಿಗದಿಪಡಿಸಿದ ಅಭ್ಯರ್ಥಿಗಳ ರೋಲ್ ಸಂಖ್ಯೆ ವಿವರ ಇಂತಿದೆ. ಎ.ವಿ.ಕಮಲಮ್ಮ ಮಹಿಳಾ ಕಾಲೇಜು, ಅಕ್ಕಮಹಾದೇವಿ ರಸ್ತೆ, ಪಿ.ಜೆ.ಬಡಾವಣೆ, ದಾವಣಗೆರೆ ಇಲ್ಲಿ ರೋಲ್ ಸಂಖ್ಯೆ 9200001 ಇಂದ 9200660 ವರೆಗೆ, ಅನುಭವ ಮಂಟಪ ಸ್ವತಂತ್ರ ಪದವಿಪೂರ್ವ ಕಾಲೇಜು, ಅನುಭವ ಮಂಟಪ, ಹದಡಿ ರಸ್ತೆ, ದಾವಣಗೆರೆ ಇಲ್ಲಿ 9200681 ರಿಂದ 9201280 ವರೆಗೆ, ಸೆಂಟ್ ಜಾನ್ಸ್ ಹೈಸ್ಕೂಲ್, ಶಿವಕುಮಾರಸ್ವಾಮಿ ಬಡಾವಣೆ, ಹೆಚ್‍ಆರ್‍ಬಿ ಲೇಔಟ್, ದಾವಣಗೆರೆ- 9201301 ರಿಂದ 9201900 ವರೆಗೆ. ಬಿ.ಐ.ಇ.ಟಿ ಕಾಲೇಜು, ಶಾಮನೂರು ರಸ್ತೆ, ದಾವಣಗೆರೆ- 9201921 ರಿಂದ 9202520 ವರೆಗೆ. ಎಆರ್‍ಜಿ ಕಲಾ ಮತ್ತು ವಾಣಿಜ್ಯ ಕಾಲೇಜು, ಪಿ.ಜೆ.ಬಡಾವಣೆ, ದಾವಣಗೆರೆ-9202541 ರಿಂದ 9203040 ವರೆಗೆ. ಜಿ.ಎಂ.ಐ.ಟಿ ಕಾಲೇಜು, ಹರಿಹರ ರಸ್ತೆ, ದಾವಣಗೆರೆ- 9203061 ರಿಂದ 9203560 ವರೆಗೆ. ಸಿದ್ಧಗಂಗಾ ಪಿ.ಯು.ಕಾಲೇಜು, ಕೆ.ಟಿ.ಜೆ. ನಗರ 18ನೇ ಕ್ರಾಸ್, ದಾವಣಗೆರೆ 9203581 ರಿಂದ 9204080 ವರೆಗೆ. ಮೋತಿ ವೀರಪ್ಪ ಸರ್ಕಾರಿ ಪಿ.ಯು.ಕಾಲೇಜು, ಗುಂಡಿ ಸರ್ಕಲ್ ಹತ್ತಿರ, ದಾವಣಗೆರೆ-9204101 ರಿಂದ 9204600 ವರೆಗೆ. ಎಸ್.ಬಿ.ಸಿ. ಪ್ರಥಮ ದರ್ಜೆ ಕಾಲೇಜು, ‘ಎ’ ಬ್ಲಾಕ್, ಎಸ್.ಎಸ್. ಬಡಾವಣೆ, ದಾವಣಗೆರೆ-9204621 ರಿಂದ 9205060 ವರೆಗೆ. ಜೈನ್ ಪಾಲಿಟೆಕ್ನಿಕ್, ಬಾಡ ಕ್ರಾಸ್, ಅವರಗೆರೆ, ದಾವಣಗೆರೆ-9205081 ರಿಂದ 9205500 ವರೆಗೆ. ಜೈನ್ ಇನ್ಸ್‍ಟ್ಯೂಟ್ ಆಪ್ ಟೆಕ್ನಾಲಜಿ, ಬಾಡ ಕ್ರಾಸ್, ಅವರಗೆರೆ, ದಾವಣಗೆರೆ 9205521 ರಿಂದ 9205920 ವರೆಗೆ. ಜಿ.ಎಂ.ಹಾಲಮ್ಮ ಪ.ಪೂ. ಕಾಲೇಜು, ಜಿ.ಎಂ.ಐ.ಟಿ ಕ್ಯಾಂಪಸ್, ಹರಿಹರ ರಸ್ತೆ, ದಾವಣಗೆರೆ-9205941 ರಿಂದ 9206340 ವರೆಗೆ. ರಾಜನಹಳ್ಳಿ ಸೀತಮ್ಮ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು, ಪ್ರವಾಸಿ ಮಂದಿರ ರಸ್ತೆ, ದಾವಣಗೆರೆ-9206361 ರಿಂದ 9206760 ವರೆಗೆ. ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಹೈಸ್ಕೂಲ್ ಮೈದಾನ, ಪಿ.ಜೆ. ಬಡಾವಣೆ, ದಾವಣಗೆರೆ-9206781 ರಿಂದ 9207180 ವರೆಗೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಸಿಸಿ ಬಿ ಬ್ಲಾಕ್, ಅನುಭವ ಮಂಟಪ ಹತ್ತಿರ, ದಾವಣಗೆರೆ- ರೋಲ್ ಸಂಖ್ಯೆ 9207201 ರಿಂದ 9208200 ವರೆಗಿನ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ನಿಗದಿಪಡಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಇಲಾಖಾ ವೆಬ್‍ಸೈಟ್ www.recruitment.ksp.gov.in ನಲ್ಲಿ ಡೌನ್‍ಲೋಡ್ ಮಾಡಿಕೊಂಡು, ಪ್ರವೇಶ ಪತ್ರದಲ್ಲಿ ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ 150 ನಿಮಿಷ ಮುಂಚಿತವಾಗಿ ಹಾಜರಾಗಬೇಕು ಎಂದು ದಾವಣಗೆರೆ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top