Connect with us

Dvgsuddi Kannada | online news portal | Kannada news online

ದಾವಣಗೆರೆ: ಅ.5ರೊಳಗೆ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ; ಆರ್ ಟಿಒ ಇಲಾಖೆ ಆದೇಶ

ದಾವಣಗೆರೆ

ದಾವಣಗೆರೆ: ಅ.5ರೊಳಗೆ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ; ಆರ್ ಟಿಒ ಇಲಾಖೆ ಆದೇಶ

ದಾವಣಗೆರೆ: ನಗರದ ಎಲ್ಲಾ ಆಟೋಗಳಿಗೆ ಅಕ್ಟೋಬರ್ 5ರೊಳಗೆ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ದಾವಣಗೆರೆ ಆರ್ ಟಿಒ ಇಲಾಖೆ ಆದೇಶ ಹೊರಡಿಸಿದೆ.

ಹಳೇಯ ಮೀಟರ್  ಹೊಂದಿದ ಮಾಲೀಕರು/ಚಾಲಕರು  ಪರಿಷ್ಕೃತ ಆಟೋ ದರ ಪಟ್ಟಿಯನ್ನು ಪ್ರಯಾಣಿಕರಿಗೆ ಕಾಣುವಂತೆ ಆಟೋ ಚಾಲಕನ ಸೀಟಿನ ಹಿಂಭಾಗ ಅಂಟಿಸಬೇಕು. ಉಳಿದ ಮಾಲೀಕರು/ಚಾಲಕರು ಹೊಸ ಮೀಟರ್ ಅಳವಡಿಸಿಕೊಳ್ಳಬೇಕು. ಹಳೇಯ ಮೀಟರ್ ಹೊಂದಿದವರು ಅ. 31ರೊಳಗೆ ಹೊಸ ಮೀಟರ್ ಅಳವಡಿಸಿಕೊಳ್ಳಬೇಕು. ಅಲ್ಲಿವರೆಗೆ ಪರಿಷ್ಕೃತ ದರದಲ್ಲಿಯೇ ಸಂಚರಿಸಬೇಕು ಎಂದು ಆದೇಶಿಸಲಾಗಿದೆ.

ಮೀಟರ್ ಅಳವಡಿಕೆಗೆ ಈಗಾಲೇ ಕಾಲಮಿತಿಯನ್ನು ನೀಡಲಾಗಿದ್ದು, ಇದೀಗ ಅ.05ಕ್ಕೆ ಮರು ನಿಗದಿ ಮಾಡಿದ್ದು, ಈ ಸಮಯದದೊಳಗೆ ಎಲ್ಲ ಆಟೋಗಳಿಗೆ ಮಾಲೀಕರು/ಚಾಲಕರು ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top