ದಾವಣಗೆರೆ: ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ (bhadra dam) ಮಲೆನಾಡು ವ್ಯಾಪ್ತಿಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಇಂದು(ಜು.23) ಬೆಳಗ್ಗೆ ಹೊತ್ತಿಗೆ 9,398 ಕ್ಯೂಸೆಕ್ ನಷ್ಟಿದೆ. ಮುಂಗಾರು ಮಳೆ ಪ್ರಾರಂಭವಾಗಿ ಎರಡು ತಿಂಗಳಲ್ಲಿಯೇ ಭದ್ರಾ ಜಲಾಶಯ ನೀರಿನ ಮಟ್ಟ 179.6 ಅಡಿಗೆ ತಲುಪಿದೆ. ಈ ಮೂಲಕ ಭರ್ತಿಗೆ ಕೇವಲ 6.6 ಅಡಿ ಮಾತ್ರ ಬಾಕಿ ಇದೆ. ಇದು ಅಚ್ಚುಕಟ್ಟು ರೈತರಲ್ಲಿ ಸಂತಸ ತಂದಿದೆ.
ಮುಂಗಾರು ಮಳೆ ಮೇ ಕೊನೆ ವಾರದಲ್ಲಿಯೇ ಪ್ರವೇಶ ಪಡೆದರೂ ಜೂ.12ರಿಂದ ಮಲೆನಾಡು ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ಭದ್ರಾ ಜಲಾಶಯ ಇಂದಿನ ( ಜು.23) ನೀರಿನ ಮಟ್ಟ 179.6 ಅಡಿ ಇದ್ದು, ಒಳ ಹರಿವು 9,398 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 168.2 ಅಡಿ ನೀರು ಇತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಸೂಚನೆಯಂತೆ ಸಾಕಷ್ಟು ಮಳೆ ಸುದಿದೆ. ಹೀಗಾಗಿ ಈ ವರ್ಷ ಬೇಗನೇ ಡ್ಯಾಂ ತುಂಬಿದೆ.
ಭದ್ರಾ ಜಲಾಶಯ ಇಂದಿನ ನೀರಿನ ಮಟ್ಟ
- ದಿನಾಂಕ :23-7-2025
- ಒಟ್ಟು ನೀರಿನ ಸಾಮರ್ಥ್ಯ: 71.54 ಟಿಎಂಸಿ
- ಪ್ರಸ್ತುತ ನೀರಿನ ಮಟ್ಟ ; 63,587 ಟಿಎಂಸಿ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಮಟ್ಟ: 179.6 ಅಡಿ
- ಒಳ ಹರಿವು :9,398 ಕ್ಯೂಸೆಕ್
- ಹೊರ ಹರಿವು : 7,118 ಕ್ಯೂಸೆಕ್
- ಕ್ರೆಸ್ಟ್ ಗೇಟ್ : 4, 208 ಕ್ಯೂಸೆಕ್
- ಎಡ ದಂಡೆ : 00
- ಬಲ ದಂಡೆ : 200 ಎವಿಜಿ
- ಕಳೆದ ವರ್ಷ ಈ ದಿನದ ನೀರಿನ ಮಟ್ಟ: 168.2 ಅಡಿ
- ಕಳೆದ ವರ್ಷದ ಇದೇ ದಿನ ಒಳಹರಿವು: 20045 ಕ್ಯೂಸೆಕ್



